ಕಾಳಗಿ: ಮುರುಘೇಂದ್ರ ಶಿವಯೋಗಿಗಳ ರಥೋತ್ಸವ

| Published : Jan 19 2024, 01:49 AM IST

ಸಾರಾಂಶ

ಕಾಳಗಿ ತಾಲೂಕು ಸಮೀಪದ ರಟಕಲ್ ವಿರಕ್ತ ಶ್ರೀಮಠದ 60ನೇ ಜಾತ್ರೆ, ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾಳಗಿ

ತಾಲೂಕು ಸಮೀಪದ ರಟಕಲ್ ವಿರಕ್ತ ಶ್ರೀಮಠದ 60ನೇ ಜಾತ್ರೆ, ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು.

ಬೆಳಗಿನಿಂದಲೆ ಗ್ರಾಮಸ್ಥರು ಶ್ರೀಮಠದ ನೀಲಕಂಠ ಸ್ವಾಮಿಯ ಗದ್ದುಗೆ ನೈವೇದ್ಯ ಸಮರ್ಪಸಿದರು. ಬಾಜಾ ಭಜಂತ್ರಿ ಮಂಗಳ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಮ.1 ಗಂಟೆಗೆ ಮಹಾ ಪ್ರಸಾದಕ್ಕೆ ಶ್ರೀ ಮಠದ ಪೀಠಾಧಿಪತಿ ಸಿದ್ದರಾಮ ಶಿವಯೋಗಿ ಚಾಲನೆ ನೀಡಿದರು.

ನಂತರ ಭಕ್ತರು ಪ್ರಸಾದ ಸೇವಿಸಿದರು. ಸಂಜೆ 6.30ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಸೇರಿ ರಥೋತ್ಸವನ್ನು ಸಂಭ್ರಮದಿಂದ ನೆರವೇರಿಸಿದರು. ನೆರೆದ ಭಕ್ತರು ಹೂ ಹಣ್ಣು ಉತ್ತತ್ತಿ ಏಸೆದು ಭಕ್ತಿ ಸಮರ್ಪಿಸಿ ರಥೋತ್ಸವಕ್ಕೆ ಮೆರಗು ನೀಡಿದರು.

ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಹುಲಸೂರ ಡಾ.ಶಿವನಾಂದ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯೆ ಮುರುಘೇಂದ್ರ ಶಿವಯೋಗಿಗಳು, ಮತ್ತು ನೀಲಕಂಠ ಸ್ವಾಮೀಜಿ ರಟಕಲ್ ಗ್ರಾಮಕ್ಕೆ ಮುತ್ತಿನಂತಿದ್ದರು, ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಜೀವನ ಸಾಗಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಂಡರೆ ಸಾರ್ಥಕತೆ ಆಗುತ್ತದೆ ಎಂದರು.

ಮುತ್ಯಾನ ಬಬಲಾದ ಶ್ರೀ, ಭರತನೂರ ವಿರಕ್ತಮಠದ ಗುರುನಂಜೇಶ್ವರ ಶಿವಯೋಗಿ, ನಾಗೂರ ವಿರಕ್ತ ಮಠದ ಅಲ್ಲಮಪ್ರಭು ಶಿವಯೋಗಿ, ರಟಕಲ್ ರೇವಣಸಿದ್ದ ಶಿವಾಚಾರ್ಯರು, ಗೌರಿಗುಡ್ಡದ ರೇವಣಸಿದ್ದ ಆರಣರು, ಗ್ರಾಪಂ ಅಧ್ಯಕ್ಷ ಜಗದೀಪ್ ಮಾಳಗಿ, ರಾಜಶೇಖರ ಗುಡದಾ, ಶರಣಬಸಪ್ಪ ಮಮಶೆಟ್ಟಿ, ವೀರಣ್ಣ ಗಂಗಾಣಿ, ಶಂಕರ ಚೌಕಾ, ಗೌರಿಶಂಕರ ಕಿಣ್ಣಿ, ಶರಣು ಸೀಗಿ, ಶರಣು ಭೈರಪ್ಪನವರ, ವಿಶ್ವನಾಥ ಚಿಕ್ಕಾಗಸಿ, ಮಲ್ಲು ಮರಗುತ್ತಿ ಇದ್ದರು.