ಕಳಕಪ್ಪ ಬಂಡಿ ಅವರು ರಸ್ತೆ, ಕುಡಿಯುವ ನೀರು, ಶಿಕ್ಷಣ, ನೀರಾವರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದ ಜನಸಾಮಾನ್ಯರ ನಾಯಕರಾಗಿದ್ದಾರೆ.

ಡಂಬಳ: ಮಾಜಿ ಸಚಿವ ಕಳಕಪ್ಪ ಬಂಡಿ ಅವರು ತಮ್ಮ ಅಧಿಕಾರದಲ್ಲಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದರು ಎಂದು ಬಿಜೆಪಿ ಡಂಬಳ ಮಂಡಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಮಠದ ಶ್ಲಾಘಿಸಿದರು.

ಮಾಜಿ ಸಚಿವ ಕಳಖಪ್ಪ ಬಂಡಿ ಅವರ ಜನ್ಮದಿನದ ಪ್ರಯುಕ್ತ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮತ್ತು ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿ, ಕಳಕಪ್ಪ ಬಂಡಿ ಅವರು ರಸ್ತೆ, ಕುಡಿಯುವ ನೀರು, ಶಿಕ್ಷಣ, ನೀರಾವರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದ ಜನಸಾಮಾನ್ಯರ ನಾಯಕರಾಗಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ, ಮುಖಂಡರಾದ ನಾಗರಾಜ ಕಾಟರಳ್ಳಿ, ಉಮೇಶ ಅಂಕದ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಲೇಜು ನಿರ್ಮಾಣ, ಶಿಕ್ಷಣಕ್ಕೆ ಹೆಚ್ಚು ಆದ್ಯತೆ, ರಸ್ತೆಗಳು ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನದ ಹೊಳೆಯನ್ನು ರೋಣ ಮತಕ್ಷೇತ್ರಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಹರಿಸಿದ್ದಾರೆ ಎಂದರು.

ಯುವ ಮುಖಂಡರಾದ ಪ್ರಕಾಶ ಕೋತಂಬ್ರಿ, ಶಿವಾನಂದ ಬಂಡಿ ಮಾತನಾಡಿ, ಕಳಕಪ್ಪ ಬಂಡಿ ಅವರು ರೈತರು, ಬಡವರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿದ ನಾಯಕರಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಲವು ಗ್ರಾಮಗಳಿಗೆ ಅನುದಾನ ಕಲ್ಪಿಸಿ ಅಭಿವೃದ್ಧಿಯ ಹೆಜ್ಜೆಗುರುತು ಮೂಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆ.ಕೆ. ಬಂಡಿ, ಹನುಮಂತಪ್ಪ ಹಾದಿಮನಿ, ಮುಖಂಡರಾದ ರವಿ ಕರಿಗಾರ, ಬಸವರಾಜ ಸಂಗನಾಳ, ಗವಿಯಪ್ಪ ಮಠದ, ಪುಂಡಲೀಕ ಪಾರಪ್ಪನವರ, ಪ್ರಜ್ವಲ್‌ ಮಾನೆ, ಶ್ರೀಧರ ಬಂಡಿ, ಹನುಮಪ್ಪ ಬಂಡಿ, ಫಕೀರಪ್ಪ ಬಿಸಾಟಿ, ಮುದಕಪ್ಪ ಮುಳಗುಂದ, ಪಕ್ಷದ ಕಾರ್ಯಕರ್ತರು ಇದ್ದರು. ಇಂದು ರಾಜೀವ್‌ಗಾಂಧಿ, ಅರಸು ಜನ್ಮದಿನಾಚರಣೆ

ಗದಗ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜಯಂತಿ ಆಚರಣೆ ಅಂಗವಾಗಿ ಹಣ್ಣುಗಳ ವಿತರಣಾ ಕಾರ್ಯಕ್ರಮ ಆ. 20ರಂದು ಬೆಳಗ್ಗೆ 10.30ಕ್ಕೆ ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.