ಕಲಾಲ ಸಮಾಜ ಶ್ರೀರಾಮನ ಚಂದ್ರನ ಅನುಯಾಯಿಗಳು: ಕಡಾಡಿ

| Published : Nov 01 2024, 12:35 AM IST

ಕಲಾಲ ಸಮಾಜ ಶ್ರೀರಾಮನ ಚಂದ್ರನ ಅನುಯಾಯಿಗಳು: ಕಡಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾಲ ಸಮಾಜ ಸಣ್ಣ ಸಮಾಜವಾಗಿದ್ದರೂ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚಂದ್ರನ ಅನುಯಾಯಿಗಳಾಗಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಕಲಾಲ ಸಮಾಜ ಸಣ್ಣ ಸಮಾಜವಾಗಿದ್ದರೂ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚಂದ್ರನ ಅನುಯಾಯಿಗಳಾಗಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ. ಈ ಸಮುದಾಯದ ಜನರಿಗೆ ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಸಮುದಾಯದ ಭವನದ ಅವಶ್ಯಕತೆ ಇದ್ದು, ಇದನ್ನು ಮನಗಂಡು ಭವನ ನಿರ್ಮಾಣ ಮಾಡಲು ದೃಢ ಹೆಜ್ಜೆ ಇಟ್ಟಿರುವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಬುಧವಾರ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀರಾಮ ಮಂದಿರ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ವೈಯಕ್ತಿಕ ಲಾಭ ಎಂಬ ಮನೋಭಾವ ಎಲ್ಲರಲ್ಲೂ ಮೂಡುತ್ತಿದೆ. ಈ ಮನೋಭಾವ ಬದಿಗಿರಿಸಿ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದ ಅವರು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭ, ಬಡ ಕುಟುಂಬದ ಜನರಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ. ಪಟ್ಟಣದ ಸಮಾಜ ಬಂಧುಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು

ಪ್ರಮುಖರಾದ ಸುರೇಶ ಕಬ್ಬೂರ, ದತ್ತು ಕಲಾಲ, ಚಂದು ಕಲಾಲ, ಮನೋಹರ ಕಲಾಲ, ಬಸವರಾಜ ಕಡಾಡಿ, ಶ್ರೀಶೈಲ ತುಪ್ಪದ, ಲೋಹಿತ ಕಲಾಲ, ಶಾನೂರ ಕಲಾಲ, ಕಿರಣ ಕಲಾಲ, ಗುರುನಾಥ ಮಧಬಾಂವಿ, ಶಿವಲಿಂಗ ಕುಂಬಾರ, ದಶಗೀರ ನದಾಫ್, ಸೋಮಲಿಂಗ ಹಡಗಿನಾಳ ಇತರರು ಇದ್ದರು.