ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ಧರ್ಮ ವಿರೋಧಿಸುವ ಸಂತರು ಕೇಸರಿ ಬದಲಿಗೆ ಹಸಿರು ಅಂಗಿ ಧರಿಸಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ಹೇಳಿದರು.ನಗರದ ಕಲಾಮಂದಿರದಲ್ಲಿ ಬುಧವಾರ ಹಿಂದೂ ಜಾಗೃತ ವೇದಿಕೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವೀರಶೈವ- ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಕೆಲವು ಸ್ಬಾಮೀಜಿಗಳೇ ಮಾಡುತ್ತಿದ್ದಾರೆ. ಸಾಣೆಹಳ್ಳಿ ಸ್ವಾಮೀಜಿ ಲಿಂಗಾಯತರು ಮುಸ್ಲಿಮರು ಒಂದೇ ಎನ್ನುವಂತೆ ಮಾತನ್ನಾಡಿ ಸನಾತನ ವಿರೋಧಿಯಾಗಿದ್ದಾರೆ. ಕನೇರಿ ಶ್ರೀಗಳನ್ನು ನಿರ್ಬಂಧಿಸುವವರು ನಿಜಗುಣಾನಂದ, ಸಾಣೆಹಳ್ಳಿ ಶ್ರೀಗಳಿಗೆ ಏಕೆ ನಿರ್ಬಂಧಿಸಿಲ್ಲ? ಎಂದು ಕಿಡಿಕಾರಿದರು.ಸಚಿವ ಎಂ.ಬಿ. ಪಾಟೀಲರು ಮತ್ತೆ ಲಿಂಗಾಯತರನ್ನು ಒಡೆಯಲು ಹೊರಟಿದ್ದಾರೆ. ಬಸವಣ್ಣ ಸನಾತನ ಧರ್ಮದ ಲೋಪ ಸರಿಪಡಿಸಿದರೇ ಹೊರತು ಪ್ರತ್ಯೇಕ ಧರ್ಮ ಕಟ್ಟಲಿಲ್ಲ. ಬಸವಣ್ಣರನ್ನು ನಕ್ಸಲೈಟ್ ಎಂಬಂತೆ ಬಿಂಬಿಸುವ ಹುನ್ನಾರ ನಡೆದಿದೆ. ಮೈಸೂರು ಭಾಗದ ವೀರಶೈವರು, ಉತ್ತರದ ಲಿಂಗಾಯಿತರು ಎಲ್ಲರೂ ಒಂದೇ ಎಂದರು.ಕರ್ನಾಟಕದಲ್ಲಿ ಭ್ರಷ್ಟ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಜನರು ಕಣ್ಣು ಮುಚ್ಚಿ ಮತ ಹಾಕುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಿಂದೂಗಳಿಗೆ ರಕ್ಷಣೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೈಸೂರಿನಲ್ಲಿ ಉದಯಗಿರಿ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಇಲ್ಲಿ ಸಾಬರ ಸರ್ಕಾರ ಇದೆ. ಟಿಪ್ಪು ಮೈಸೂರು ಹುಲಿಯಲ್ಲ, ಹಿಂದುಗಳ ಹತ್ಯೆ ಮಾಡಿದ ನರಭಕ್ಷಕ. ನಾಲ್ವಡಿ ಕೃಷ್ಣರಾಜ ಒಡೆಯರ್ ನಿಜವಾದ ಮೈಸೂರು ಹುಲಿ ಎಂದು ಅವರು ಬಣ್ಣಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮುಸ್ಲಿಮ್‌ಎಂದು ಹೇಳುತ್ತಾರೆ. ಅವರ ಮಗ, ನಮ್ಮ ತಂದೆ ಮೈಸೂರು ಮಹಾರಾಜರಿಗಿಂತ ಹೆಚ್ಚು ಎನ್ನುತ್ತಾರೆ. ಮಹಾರಾಜರು ಒಡೆವೆ ಒತ್ತೆ ಇಟ್ಟು ಅಣೆಕಟ್ಟು ಕಟ್ಟದಿದ್ದರೆ ಈ ಭಾಗ ಅಭಿವೃದ್ಧಿ ಆಗುತ್ತಿರಲಿಲ್ಲ. ಅವರ ಸಮ ನಿಲ್ಲಲು ಯಾರಿಂದಲೂ ಸಾಧ್ಯ ಇಲ್ಲ. ಆದರೆ, ಸ್ವಾತಂತ್ರ್ಯ ಬಂದ ಮೇಲೆ ಆಡಳಿತ ನಡೆಸಿದವರು ಮಹಾರಾಜರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಅವರು ಆರೋಪಿಸಿದರು.ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಹಿಂದೂ ಧರ್ಮ ಎಲ್ಲ ಧರ್ಮೀಮೀಯರು ಸಮಾನರಾಗಿ ಬದುಕುವ ಅವಕಾಶ ನೀಡಿದೆ. ಜಾತೀಯತೆ- ಮತೀಯತೆ ಇಲ್ಲಿಲ್ಲ ಎಂದರು.---ಬಾಕ್ಸ್ ಸುದ್ದಿಯತ್ನಾಳ್ ಅವರಿಂದ ಮೋದಿ ಮಾದರಿ ಆಡಳಿತಕನ್ನಡಪ್ರಭ ವಾರ್ತೆ ಮೈಸೂರುಬಸವನಗೌಡ ಪಾಟೀಲ್ ಯತ್ನಾಳರು ಅಸಹಾಯಕ ಸ್ಥಿತಿಯಲ್ಲಿರುವ ಹಿಂದೂ ಧರ್ಮದ ಧ್ವನಿಯಾಗಿದ್ದಾರೆ. ಶಾಸಕರಾಗಿ ಮಾದರಿ ಅಭಿವೃದ್ಧಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮಾದರಿಯಲ್ಲಿ ರಾಜ್ಯದಲ್ಲೂ ಅಭಿವೃದ್ಧಿ ಮಾಡುವುದಾಗಿ ಹಿಂದೂ ಜಾಗೃತಾ ವೇದಿಕೆ ಅಧ್ಯಕ್ಷ ಮಲ್ಲೇಶ್ ಹೇಳಿದರು.ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.ಭಜರಂಗ ಸೇನೆ ರಾಜ್ಯ ಅಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ, ಇಡೀ ಸಮಾಜ ಪರ್ವ ಕಾಲದಲ್ಲಿ ಬಂದು ನಿಂತಿದ್ದು, ಈಗ ಎಚ್ಚೆತ್ತುಕೊಳ್ಳದೇ ಇದ್ದರೆ ಉಳಿಗಾಲವಿಲ್ಲ. ದೇಶ ಹಾಗೂ ರಾಜ್ಯಕ್ಕೆ ಹಿಂದುತ್ವ ಆಧಾರಿತ ಅಭಿವೃದ್ಧಿ ಬೇಕಿದೆ ಎಂದರು. ಹಿರಿಯ ವಕೀಲರಾದ ಎಂ.ಡಿ. ಹರೀಶ್ ಕುಮಾರ್ ಹೆಗ್ಡೆ, ಎಚ್.ಎನ್. ವೆಂಕಟೇಶ್, ಚಿಂತಕ ಭಾಸ್ಕರ ನಾಯ್ಡು, ಎನ್. ಶ್ರೀನಿವಾಸನ್ ಗುರೂಜಿ, ಉದ್ಯಮಿ ಪಿ.ಎಸ್. ಪಾಟೀಲ್, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸುನೀಲ್, ಶಂಭು ಪಟೇಲ್, ಮಧು ಯಡಿಯಾಲ, ಪ್ರಮೋದ್ ಚಿಕ್ಕಮಣ್ಣೂರು, ಕರುಹಟ್ಟಿ ರಾಜಶೇಖರ ಮೊದಲಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))