ಕಲಾರಾಧಾನೆಯೂ ಸಮಾಜಸೇವೆಯ ಒಂದು ಭಾಗ: ಎನ್.ಕೆ. ಭಟ್ಟ

| Published : Apr 08 2024, 01:01 AM IST

ಕಲಾರಾಧಾನೆಯೂ ಸಮಾಜಸೇವೆಯ ಒಂದು ಭಾಗ: ಎನ್.ಕೆ. ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕಲೆ ಭಾರತೀಯ ಮೌಲ್ಯವನ್ನು ಸಂಸ್ಕೃತಿಯನ್ನು ಉಳಿಸುತ್ತವೆ. ಹಾಗಾಗಿಯೇ ಹಿರಿಯರು ಅದಕ್ಕೆ ಅಷ್ಟು ಮಹತ್ವ ನೀಡಿ ಆರಾಧಿಸಿಕೊಂಡು ಬಂದಿದ್ದಾರೆ.

ಯಲ್ಲಾಪುರ: ಯಕ್ಷಗಾನ ಮತ್ತು ನಾಟಕ ಕಲೆ ಸಮಾಜದಲ್ಲಿ ಒಂದು ಉತ್ತಮ ಸಂಸ್ಕಾರ, ಮೌಲ್ಯದ ಜತೆಗೆ ಸಮಾಜವನ್ನು ಶ್ರೀಮಂತಗೊಳಿಸುತ್ತದೆ. ಕಲಾರಾಧನೆ ಸಮಾಜದ ಸೇವೆಯ ಒಂದು ಭಾಗ. ತನ್ಮೂಲಕ ಸಮಾಜ ತಿದ್ದುವ ಒಂದು ಮಾಧ್ಯಮ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.

ಏ. ೫ರಂದು ತಾಲೂಕಿನ ನಂದೊಳ್ಳಿ ಪ್ರಾಥಮಿಕ ಶಾಲಾ ಆವಾರದಲ್ಲಿ ರಾಮಲಿಂಗೇಶ್ವರ ನಾಟಕ ಕಲಾಬಳಗದ ದಶಮಾನೋತ್ಸವ ಸಮಾರಂಭ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಲೆ ಭಾರತೀಯ ಮೌಲ್ಯವನ್ನು ಸಂಸ್ಕೃತಿಯನ್ನು ಉಳಿಸುತ್ತವೆ. ಹಾಗಾಗಿಯೇ ಹಿರಿಯರು ಅದಕ್ಕೆ ಅಷ್ಟು ಮಹತ್ವ ನೀಡಿ ಆರಾಧಿಸಿಕೊಂಡು ಬಂದಿದ್ದಾರೆ. ಈ ಪರಂಪರೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆ ಹೊತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಲ್ಎಸ್ಎಂಪಿ ಸೊಸೈಟಿ ಅಧ್ಯಕ್ಷ ಟಿ.ಆರ್. ಹೆಗಡೆ ತೊಂಡೆಕೆರೆ, ಪತ್ರಕರ್ತ ಜಿ.ಎನ್. ಭಟ್ಟ ತಟ್ಟೀಗದ್ದೆ ಮಾತನಾಡಿದರು. ಕಲಾಬಳಗದ ಅಧ್ಯಕ್ಷ ನಾಗರಾಜ ಕವಡೀಕೆರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಸಾಮಾಜಿಕ ಕಾರ್ಯಕರ್ತ ಎನ್.ಕೆ. ಭಟ್ಟ ಮೆಣಸುಪಾಲ ಮುಂತಾದವರು ಮಾತನಾಡಿದರು. ಟಿಎಂಎಸ್ ನಿರ್ದೇಶಕ ವೆಂಕಟರಮಣ ಕಿರಕುಂಭತ್ತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಎನ್. ಭಟ್ಟ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್.ಜಿ. ಭಟ್ಟ ಬೆಳಸೂರು, ಟಿ.ವಿ. ಭಾಗ್ವತ ನಂದೊಳ್ಳಿ, ಭಾಸ್ಕರ ಭಟ್ಟ ಗುಂಡ್ಕಲ್, ಶಿಕ್ಷಕ ಭಾಸ್ಕರ ನಾಯ್ಕ, ನರಸಿಂಹ ಭಟ್ಟ ದರ್ಬೇಮನೆ, ನರಸಿಂಹ ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ಬಳಗದ ಸದಸ್ಯರಾಗಿದ್ದ ದಿ. ಪ್ರಕಾಶ ಭಾಗ್ವತ ಅವರಿಗೆ ಸದ್ಗತಿ ಕೋರಿ, ಒಂದು ನಿಮಿಷ ಮೌನ ಆಚರಿಸಲಾಯಿತು. ಬಳಗದ ಶಿವ ನಾಯ್ಕ ನಿರ್ವಹಿಸಿದರು. ಚಂದ್ರಶೇಖರ ಭಟ್ಟ ವಂದಿಸಿದರು. ನಂತರ ಪಾಪದ ಪಿಂಡ ಹೊತ್ತ ಪತಿವ್ರತೆ ಎಂಬ ನಾಟಕ ಪ್ರದರ್ಶನಗೊಂಡಿತು.