ಐವರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ

| Published : Oct 28 2024, 12:45 AM IST

ಸಾರಾಂಶ

ಕಲೆಮನೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಪ್ರಸಿದ್ಧ ನೃತ್ಯ ಸಂಸ್ಥೆಯಾದ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ಕಲೆಮನೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 46ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದಲ್ಲಿ ಮೋಹಿನಿ ಆಟಂ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು. ಚೆನ್ನೈನ ಸೂರ್ಯನಾರಾಯಣ ಮೂರ್ತಿ, ಸಾಗರದ ವಿದ್ವಾನ್ಎಂ. ಗೋಪಾಲ್, ಮೋಹಿನಿ ಆಟಂನ ಕಲಾಮಂಡಲಮ್ ಶ್ರೀಜಾ ಆರ್. ಕೃಷ್ಣನ್, ವಿದುಷಿ ಸಲೋನಿ ಜಗದೀಶ್, ವಿದುಷಿ ಡಿ. ಮಂಜುಳಾ ಅವರಿಗೆ ನೀಡಲಾಯಿತು.

ಬಳಿಕ ಪ್ರಶಸ್ತಿ ಸ್ವೀಕರಿಸಿದ ಗುರುಗಳು ಮತ್ತು ಶಿಷ್ಯರಿಂದ ಯಶಸ್ವಿ ನೃತ್ಯ ಪ್ರದರ್ಶನ ನಡೆಯಿತು.