ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 5 ರ‍್ಯಾಂಕ್‌ಗಳನ್ನು ಪಡೆಯುವುದರೊಂದಿಗೆ ಉತ್ತನ ಸಾಧನೆ ಮಾಡಿದೆ. 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ಫಲಿತಾಂಶ ಬಿಡುಗಡೆಯಾದಾಗ ಶಾಲೆಯ ವಿದ್ಯಾರ್ಥಿ ಸಚಿನ್ ಡಿ. ನಾಯ್ಕ್ 622 ಅಂಕ ಗಳಿಸಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿದ್ದರು. ಮರು ಮೌಲ್ಯಮಾಪನದ ನಂತರ ಈ ವಿದ್ಯಾರ್ಥಿಯ ಒಟ್ಟು ಅಂಕ 623 ಆಗುವುದರೊಂದಿಗೆ ರಾಜ್ಯದಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿನಿ ನಕ್ಷತ್ರಳ ಒಟ್ಟು ಅಂಕ 620ರಿಂದ 622ಕ್ಕೆ ಏರಿಕೆಯಾಗಿರುವುದರಿಂದ ರಾಜ್ಯದಲ್ಲಿ 6ನೇ ರ‍್ಯಾಂಕ್‌ನಿಂದ 4ನೇ ರ‍್ಯಾಂಕ್ ಗಳಿಸಿದ್ದಾರೆ. ಅದೇ ರೀತಿ ಗಗನ್ ಪಾಟೀಲ್ 622 ಅಂಕ ಗಳಿಸಿ 4ನೇ ರ‍್ಯಾಂಕ್ ಗಳಿಸಿದ್ದಾರೆ. ಮರು ಮೌಲ್ಯಮಾಪನದ ನಂತರ ಪ್ರಾಂಶು 618 ಅಂಕಗಳೊಂದಿಗೆ 8ನೇ ರ‍್ಯಾಂಕ್, ಹರ್ಷ ಜಿ.ಎಸ್ 617 ಅಂಕಗಳೊಂದಿಗೆ 9ನೇ ರ‍್ಯಾಂಕ್, ಸ್ನಿಗ್ಧಾ ಜೈನ್ 616 ಅಂಕಗಳೊಂದಿಗೆ 10ನೇ ರ‍್ಯಾಂಕ್, ದರ್ಶಿತ್ ಗೌಡ 616 ಅಂಕಗಳೊಂದಿಗೆ 10ನೇ ರ‍್ಯಾಂಕ್ ಮತ್ತು ಭರತ್ ಎಸ್.ಎಚ್. 616 ಅಂಕಗಳನ್ನು ಗಳಿಸಿ 10ನೇ ರ‍್ಯಾಂಕ್ ಪಡೆದು ತಮ್ಮ ಒಟ್ಟು ಅಂಕಗಳನ್ನು ಮಾತ್ರವಲ್ಲದೆ ರ‍್ಯಾಂಕ್‌ಗಳನ್ನು ಉತ್ತಮಗೊಳಿಸಿದ್ದಾರೆ.ಉಳಿದಂತೆ ಪ್ರೀತಮ್ ಪಾಟೀಲ್ 615, ಅಭಿಜ್ಞಾ ಪಿ 615, ಅಪ್ರಮೇಯ ರಂಗನ್ 613, ಪ್ರಾನ್ವಿ 612, ಅದಿತಿ ಅಡಪಾ 610, ಆಶಿಶ್ ಎಸ್ ಪಿ 609, ಪ್ರಿಯಾ ಎಸ್.ಕೆ .608, ರಾಮ ಅಪ್ರಮೇಯ 608, ಅರ್ಹನ್ ಬೆನ್ನಾಡಿ 608, ಸೂರ್ಯ ಜಿ.ಪಿ. 607, ಬಲರಾಮ್ 600 ಮತ್ತು ರೀನಲ್ 600 ಅಂಕಗಳನ್ನು ಗಳಿಸಿದ್ದಾರೆ. ರ‍್ಯಾಂಕ್ ಗಳಿಸಿದ ಎಲ್ಲ 14 ವಿದ್ಯಾರ್ಥಿಗಳು ಮತ್ತು ಮರುಮೌಲ್ಯಮಾಪನದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ಉಪ ಮುಖ್ಯ ಶಿಕ್ಷಕ ಜಯಶೀಲ್ ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ್ಯಾಂಕ್ಗಳ ಹೆಗ್ಗಳಿಕೆ
ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 5 ರ‍್ಯಾಂಕ್‌ಗಳನ್ನು ಪಡೆಯುವುದರೊಂದಿಗೆ ಉತ್ತನ ಸಾಧನೆ ಮಾಡಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.