ಕಲ್ಲಾಪು: ಆರೋಗ್ಯ ಉಚಿತ ತಪಾಸಣಾ ಶಿಬಿರ

| Published : Oct 01 2024, 01:32 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ ಹತ್ತನೇ ತೋಕೂರು, ಪಡುಪಣಂಬೂರು ಬೆಳ್ಳಾಯರು ಒಕ್ಕೂಟ, ಶ್ರೀ ವೀರಭದ್ರ ಮಹಾಮಾಯಿ ವಾಚನಾಲಯ ಮತ್ತು ಯುವಕ ಮಂಡಲ, ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ಸಭಾಭವನದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಶಿಬಿರಗಳ ಮೂಲಕ ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡುವ ಸೇವಾ ಸಂಸ್ಥೆಗಳ ಕಾರ್ಯದಕ್ಷತೆ ಅಭಿನಂದನೀಯ ಎಂದು ಮುಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ ಹತ್ತನೇ ತೋಕೂರು, ಪಡುಪಣಂಬೂರು ಬೆಳ್ಳಾಯರು ಒಕ್ಕೂಟ, ಶ್ರೀ ವೀರಭದ್ರ ಮಹಾಮಾಯಿ ವಾಚನಾಲಯ ಮತ್ತು ಯುವಕ ಮಂಡಲ, ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನ ದೇರಳಕಟ್ಟೆ ಎ ಬಿ ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್‌ ಡೆಂಟಲ್ ಸೈನ್ಸ್ ಕೆ ಎಸ್. ಹೆಗ್ಡೆ ಆಸ್ಪತ್ರೆ ಸಹಕಾರದೊಂದಿಗೆ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಜಪೆ ವಲಯದ ಯೋಜನಾಧಿಕಾರಿ ಕರುಣಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಗುರಿಕಾರ ಕಾಂತಣ್ಣ ಗುರಿಕಾರ್, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲೋಲಾಧರ್ ಶೆಟ್ಟಿಗಾರ್, ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ್, ಮಹಿಳಾ ವೇದಿಕೆ ಅಧ್ಯಕ್ಷೆ ವೇದಾವತಿ ಎಚ್ .ಶೆಟ್ಟಿಗಾರ್, ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು, ಮುಲ್ಕಿ ವಲಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ,ವೈದ್ಯಾಧಿಕಾರಿ ಸಂಜನ್, ಡಾ.ಬಾಲಚಂದ್ರ, ಡಾ. ಗೋಕುಲ್ ಸುರೇಶ್, 10ನೇ ತೋಕೂರು ಒಕ್ಕೂಟದ ಅಧ್ಯಕ್ಷ ಮನೋಹರ್ ಜಿ. ಕುಂದರ್, ಬೆಳ್ಳಾಯರು ಸೇವಾ ಒಕ್ಕೂಟದ ಅಧ್ಯಕ್ಷೆ ಚಂಪಾ ಮತ್ತಿತರರು ಇದ್ದರು.

ಸೇವಾ ಪ್ರತಿನಿಧಿ ಸವಿತಾ ಶರತ್ ಸ್ವಾಗತಿಸಿದರು, ಭವ್ಯ ವಂದಿಸಿದರು. ರಾಜೇಶ್ವರಿ ಕಲ್ಲಾಪು ನಿರೂಪಿಸಿದರು, ಬಳಿಕ ಉಚಿತ ವೈದ್ಯಕೀಯ ಶಿಬಿರ ನಡೆಯಿತು.