ಸಾರಾಂಶ
ವಿಜಯಪುರ: ಮನೆಮುಂದೆ ನಿಲ್ಲಿಸಿದ್ದ ಸ್ವಾಮೀಜಿಯೊಬ್ಬರ ಬೈಕ್‌ನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರದಲ್ಲಿ ನಡೆದಿದೆ. ಕೊಲ್ಹಾರದಲ್ಲಿರುವ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿಗೆ ಸೇರಿದ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಮಾಡಲಾಗಿದೆ. ಜನೇವರಿ 24ರಂದು ತಡರಾತ್ರಿ ರಾಯಲ್ ಎನ್‌ಪೀಲ್ಡ್ ಬೈಕ್ ಅನ್ನು ಕಳ್ಳರು ಕದ್ದೋಯ್ದಿದ್ದಾರೆ. ರಾತ್ರಿ ವೇಳೆ ನಿಲ್ಲಿಸಿದ್ದ ಬೈಕ್ ಗೆ ಹ್ಯಾಂಡಲ್ ಲಾಕ್ ಹಾಕದೆ ಇರುವುದನ್ನು ಗಮನಿಸಿ ಕಳ್ಳತನ ಮಾಡಲಾಗಿದೆ.
ವಿಜಯಪುರ: ಮನೆಮುಂದೆ ನಿಲ್ಲಿಸಿದ್ದ ಸ್ವಾಮೀಜಿಯೊಬ್ಬರ ಬೈಕ್‌ನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರದಲ್ಲಿ ನಡೆದಿದೆ. ಕೊಲ್ಹಾರದಲ್ಲಿರುವ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿಗೆ ಸೇರಿದ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಮಾಡಲಾಗಿದೆ. ಜನೇವರಿ 24ರಂದು ತಡರಾತ್ರಿ ರಾಯಲ್ ಎನ್‌ಪೀಲ್ಡ್ ಬೈಕ್ ಅನ್ನು ಕಳ್ಳರು ಕದ್ದೋಯ್ದಿದ್ದಾರೆ. ರಾತ್ರಿ ವೇಳೆ ನಿಲ್ಲಿಸಿದ್ದ ಬೈಕ್ ಗೆ ಹ್ಯಾಂಡಲ್ ಲಾಕ್ ಹಾಕದೆ ಇರುವುದನ್ನು ಗಮನಿಸಿ ಕಳ್ಳತನ ಮಾಡಲಾಗಿದೆ. ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಬಳಸುತ್ತಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಎಗರಿಸಿದ್ದಾರೆ. ಮೊದಲಿಗೆ ಓರ್ವ ಬಂದು ಬೈಕ್ ಹೆಂಡಲ್ ಲಾಕ್ ಇಲ್ಲದ್ದನ್ನು ಪರಿಶೀಲಿಸುವುದು, ಬಳಿಕ ಮತ್ತೋರ್ವ ಬಂದು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.