ಸಾರಾಂಶ
ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ 3.88 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬೆಳಕೂಡ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹3.88 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬೆಳಕೂಡ ಹೇಳಿದರು.ತಾಲೂಕಿನ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ 33ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇರು ಬಂಡವಾಳ ₹78.76 ಲಕ್ಷ, ನಿಧಿಗಳು ₹19.63 ಕೋಟಿ, ಒಟ್ಟು ಠೇವುಗಳು ₹57.88 ಕೋಟಿ ಹೊಂದಿದೆ ಎಂದು ಹೇಳಿದರು.
ಸಂಘ ಈ ವರೆಗೆ ₹65.39 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವ ನೀಡಿದ್ದು, ₹11.55 ಕೋಟಿ ಗುಂತಾವಣಿ ಹೊಂದಿದೆ. ಪ್ರತಿ ವರ್ಷವೂ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಸಲಾಗುತ್ತಿದೆ. ಸಂಘದ ಸದಸ್ಯರಿಗೆ ಸಾಲದ ಮೊತ್ತ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗಿದೆ. ಸಂಘದ ಸದಸ್ಯರಿಗೆ ಆರೋಗ್ಯ ವಿಮೆ ಮಾಡಲಾಗುವುದು ಎಂದು ತಿಳಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸಂಘದ ಸದಸ್ಯರ ಮಕ್ಕಳಾದ ಸಮೃದ್ಧ ಬಿ.ಪಾಟೀಲ, ಲಕ್ಷ್ಮೀ ಪಾಗದ, ನಂದಾ ಸಾಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಐಶ್ವರ್ಯ ಬಿ. ಪಾಟೀಲ, ಸುಜಾತಾ ಗೋರೋಶಿ, ಸೃಷ್ಟಿ ಸಂಸುದ್ದಿ ಇವರಿಗೆ ಕ್ರಮವಾಗಿ ₹25 ಸಾವಿರ, ₹20 ಸಾವಿರ ಹಾಗೂ ₹ 15 ಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷ ಎಸ್.ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹಣಮಂತ ಪರಕನಟ್ಟಿ, ಸುಭಾಸ ಖಾನಾಪೂರ, ಬಸಪ್ಪ ಹೆಬ್ಬಾಳ, ದುಂಡವ್ವ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ, ಪ್ರಕಾಶ ಕಲಾಲ, ಮಹಮ್ಮದ ಶೆಫಿ ಮೊಕಾಶಿ, ಕಲ್ಲೋಳೆಪ್ಪ ತೆಳಗಡೆ ಮತ್ತು ಮಾಜಿ ನಿರ್ದೇಶಕ ಭೀಮಪ್ಪ ಕಡಾಡಿ, ಶಿವಪ್ಪ ಹೆಬ್ಬಾಳ, ಬಾಳಣ್ಣ ಕಂಕಣವಾಡಿ ಉಪಸ್ಥಿತರಿದ್ದರು.ರಮೇಶ ಕವಟಗೊಪ್ಪ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ನಿರೂಪಿಸಿದರು. ಲೆಕ್ಕ ನಿರ್ವಾಹಕ ಈರಯ್ಯ ಕರಗಾಂವಿಮಠ ವಂದಿಸಿದರು.