ಸಾರಾಂಶ
Kaluvehalli rape case: notice at accused's door
ಚಳ್ಳಕೆರೆ: ಕಾಲುವೇಹಳ್ಳಿ ಗ್ರಾಮದಲ್ಲಿ ಕಳೆದ ವಾರ ಹರಿಜನ ಬಂಧುಗಳಿಗೆ ಕ್ಷೌರ ಮಾಡಕೂಡದು ಎಂದು ಗ್ರಾಮದ ಕೆಲವರು ಆಕ್ಷೇಪವೆತ್ತಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ರಕ್ಷಣಾಧಿಕಾರಿ, ತಹಸೀಲ್ದಾರ್ ಗ್ರಾಮದಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಿದ್ದರು.
ಆದರೆ, ಗ್ರಾಮದ ಐವರ ಮೇಲೆ ಪ್ರಕರಣ ದಾಖಲಾಗಿದ್ದು, ಅಂದಿನಿಂದಲೂ ಅವರು ಗ್ರಾಮವನ್ನು ತೊರೆದು ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪ ವಿಭಾಗದ ಡಿವೈಎಸ್ಪಿ ಟಿ.ಬಿ.ರಾಜಣ್ಣ ಗ್ರಾಮದ ಆರೋಪಿಗಳ ಮನೆಗಳಿಗೆ ತೆರಳಿಗೆ ಬಾಗಿಲಿಗೆ, ಠಾಣಾಗೆ ಹಾಜರಾಗಿ ತನಿಖೆ ಸಹಕರಿಸುವಂತೆ ತಿಳುವಳಿಕೆ ನೋಟಿಸ್ ಅಂಟಿಸಿದ್ದಾರೆ. ತಲೆತಪ್ಪಿಸಿಕೊಂಡಿರುವ ಆರೋಪಿಗಳ ಹುಡುಕಾಟ ಮುಂದುವರೆದಿದೆ.ಉಪ ವಿಭಾಗದ ಡಿವೈಎಸ್ಪಿ ರಾಜಣ್ಣನವರ ಮಾರ್ಗದರ್ಶನದಲ್ಲಿ ಗ್ರಾಮದ ಚಟುವಟಿಕೆಯ ಬಗ್ಗೆ ಪೊಲೀಸರು ಸ್ಥಳದಲ್ಲೇ ವಾಸ್ತವ್ಯ ಹೂಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ಸಂದರ್ಭದಲ್ಲಿ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪಸಿರಿಹಳ್ಳಿ, ಪಿಎಸ್‌ಐ ಲೋಕೇಶ್ ಮತ್ತು ಸಿಬ್ಬಂದಿ ಇದ್ದರು. ---
ಫೋಟೊ: ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಆರೋಪಿಗಳ ಮನೆಗಳಿಗೆ ನೋಟಿಸ್ ಅಂಟಿಸಿದ ಡಿವೈಎಸ್ಪಿ ಟಿ.ಬಿ.ರಾಜಣ್ಣ.೬ಸಿಎಲ್‌ಕೆ೪