ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್ಜಿಲ್ಲೆಯ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಜಿಲ್ಲೆಯಲ್ಲಿ ಕಾರ್ಮಿಕ ವರ್ಗಕ್ಕೆ, ರೈತರಿಗೆ, ನಾಗರಿಕರಿಗೆ ದಿನನಿತ್ಯ ಸಮಸ್ಯೆಗಳು ಸವಾಲಾಗಿ ನಿಂತಿವೆ ಅವುಗಳನ್ನು ಕೂಡಲೇ ಪರಿಹರಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ನೇತೃತ್ವದಲ್ಲಿ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ರಾಜ್ಯಪಾಲರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಪರಿಹಾರವಾಗುತ್ತಯೋ ಎಂಬುವುದು ನಮ್ಮ ಜಿಲ್ಲೆಯ ಜನರಿಗೆ ಕಾಡುತ್ತಿದೆ. ನಮ್ಮ ಜಿಲ್ಲೆಯ ಸಮಸ್ಯೆಗಲ್ಲಿ ಈ ಭಾಗದ ಕಲಂ 371 (ಜೆ) ವಿಶೇಷ ಅನುದಾನದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ ನಮ್ಮ ಜನಪ್ರತಿನಿಧಿ ಎನ್ನಿಸಿಕೊಂಡವರು ನಮ್ಮ ರೈತ ವರ್ಗ, ಕಾರ್ಮಿಕ ವರ್ಗ ಮತ್ತು ನಾಗರಿಕರಿಗೆ ಸಂವಿಧಾನ ಬದ್ಧತೆಯ ಸೌಲಭ್ಯಗಳು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಐತಿಹಾಸಿಕವಾಗಿ ಹೆಸರುವಾಸಿಯಾಗಿ ರೈತ ಮತ್ತು ಕಾರ್ಮಿಕರ ಜೀವಾಳು ಆಗಿರುವ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಜಿಲ್ಲೆಯ ರಾಜಕೀಯ ಪ್ರತಿನಿಧಿಗಳ ಕುತಂತ್ರದಿಂದ ಬಂದ್ ಮಾಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ ಕಾರ್ಖಾನೆಯ ಕಾರ್ಮಿಕರಿಗೆ ತ್ವರಿತವಾಗಿ ಅವರಿಗೆ ಸಿಗಬೇಕಾದ ಪೂರ್ಣ ಪ್ರಮಾಣ ಸೌಲಭ್ಯಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಕಾರಂಜಾ ಸಂತ್ರಸ್ತರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಎದುರುಗಡೆ ನಿರಂತರವಾಗಿ 2 ವರ್ಷಗಳು ಮುಗಿದು 3ನೇ ವರ್ಷದ ನಿರಂತರ ಹೋರಾಟ ಮಾಡುತಿದ್ದಾರೆ ಸಂತ್ರಸ್ತರಿಗೆ ವೈಜ್ಞಾನಿಕ ಬೆಲೆ ನೀಡಿ ಅಥವಾ ಒಂದು ಹಂತದ ಸೆಟೆಲ್‌ಮೆಂಟ್ ನೀಡಿ ಎಂದು ಹಗಲು-ರಾತ್ರಿ ಸತ್ಯಾಗೃಹ ಹಮ್ಮಿಕೊಂಡಿದ್ದಾರೆ. ಈಗಿನ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಹಂತದಲ್ಲಿ ನ್ಯಾಯ ನೀಡದೇ ಇರುವುದು ಖಂಡನೀಯವಾಗಿದೆ. ಕೂಡಲೇ ಸಂತ್ರಸ್ತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಸಿದ್ಧಶ್ರೀ ಸಕ್ಕರೆ ಕಾರ್ಖಾನೆಯನ್ನು ಚಾಲನೆ ಮಾಡಿ ಸುತ್ತ-ಮುತ್ತಲಿನ ರೈತ ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕು. ಸ್ಥಗಿತಗೊಂಡ ಬೀದರ ನಾಗರಿಕ ವಿಮಾನಯಾನ ನಿರಂತರವಾಗಿ ನಡೆಯುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಬೀದರ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿಗಳ ಮಂಜೂರಾತಿ ದೊರೆತರೂ ಇಲ್ಲಿಯವರೆಗೆ ನಿಗದಿತ ಸ್ಥಳವನ್ನು ಘೋಷಿಸಿರುವುದಿಲ್ಲ. ಸ್ಥಳದ ಇತ್ಯರ್ಥ ಮಾಡಿಕೊಂಡು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಪೌರಾಡಳಿತ ಸಚಿವ ರಹೀಮ ಖಾನ್ ಅವರ ನಿರ್ಲಕ್ಷತನದಿಂದ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿಯ ಜಿ+3 (ಬಡವರಿಗೆ ಮನೆ ಕಟ್ಟಿ ಕೊಡುವ) ಯೋಜನೆ ರದ್ದಾಗಿದ್ದು, ಇದನ್ನು ಪುನರ್ ಚಾಲನೆ ನೀಡಿ, ಮನೆ ಮಂಜೂರಾತಿಯಾದ ಫಲಾನುಭವಿಗಳಿಗೆ ಮನೆ ಕಟ್ಟಿ ಕೊಡಬೇಕು. ಬೀದರ ಜಿಲ್ಲೆಯಲ್ಲಿ ಭೂ ಮಾಫಿಯಾದವರು ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಸರ್ಕಾರಿ ಭೂಮಿಯನ್ನು ಉಳಿಸಿ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗಾಗಿ ಉಪಯೋಗಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೆನೋರ್, ಸಂಸ್ಥಾಪಕ ಉಪಾಧ್ಯಕ್ಷ ಎಂ.ಡಿ. ಮಸ್ತಾನ ಮುಲ್ಲಾ, ಕಾರ್ಯಾಧ್ಯಕ್ಷ ತುಕಾರಾಮ ರಾಗಾಪೂರೆ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಏಣಕೂರ, ಶಿವರಾಜ ನೇಳವಾಳಕರ್, ಚಂದ್ರಶೇಖರ ಪಾಟೀಲ್, ನವೀಲ ಅಲ್ಲಪೂರ, ಸುಂದರ ಬಕ್ಕಚೌಡಿ, ಕಮಲಹಾಸನ್ ಭಾವಿದೊಡ್ಡಿ, ಅಂಬಾದಾಸ ಬೆಲೂರೆ, ಸಂಜುಕುಮಾರ ಗೋರನಳ್ಳಿ, ಸೂರ್ಯಕಾಂತ ಬಲ್ಲೂರ, ಜೇಮ್ಸ್, ವಿಕ್ಕಿ ಚಿಟ್ಟಾ , ಸ್ವಾಮಿದಾಸ ನಿದ್ದೆ, ವೆಂಕಟೇಶ್ವರ ಚಿದ್ರಿ, ಶ್ರೀನಾಥ ಚಿದ್ರಿ, ಅನೀಲ ಶಿಂಧೆ, ಅನೀಲ ಸಾಂಗವಿ, ರಿರ್ಚಡ್ ಹಮೀಲಾಪೂರ, ಸುಶೀಲ ಕೆಂಪೆನೋರ್, ಯೇಶಪ್ಪಾ ಶೆಂಬೆಳ್ಳಿ, ವೆಂಕಟೇಶ ಪಾಟೀಲ್, ದಾವೀದ್ ಏಕಲಾರ್, ಸುರೇಶ ದೊಡ್ಡಿ ಉಪಸ್ಥಿತರಿದ್ದರು.