ಬಿಜೆಪಿಯ ಬಲವರ್ಧನೆಗಾಗಿ ಭೀಮ ಸಮಾವೇಶ

| Published : Feb 01 2024, 02:05 AM IST

ಸಾರಾಂಶ

ಎಲ್ಲ ಸಮಾವೇಶಗಳಂತೆ ಇದು ಸಾಮಾನ್ಯ ಭಾಷಣದ ಸಮಾವೇಶವಾಗದೆ ಒಂದು ವಿಶೇಷವಾದ ಅರ್ಥಪೂರ್ಣ ಪ. ಜಾತಿಯ ಸಮಾವೇಶವಾಗಿತ್ತು. ಸಮಾವೇಶದಲ್ಲಿ ಉದ್ಘಾಟನೆಗೊಂಡ ನಂತರ ಒಂದು ಸಭಾಂಗಣದಲ್ಲಿ ದೊಡ್ಡದಾಗಿ ಅಳವಡಿಸಲಾದ ಎಲ್.ಇಡಿ ಪರದೆಯ ಮೇಲೆ ಚಿತ್ರ ಮತ್ತು ಸಂದರ್ಭ ಸನ್ನಿವೇಶಗಳ ವಿವರಣೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಅವರ ವಿವರಣೆಯ ಮೂಲಕ ಇತಿಹಾಸದ ದಾಖಲೆ ಸಾಹಿತ್ಯ, ಸತ್ಯ ಘಟನೆಗಳು ತೆರೆದುಕೊಳ್ಳಲಾರಂಭಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬನ್ನೂರು ವರ್ತುಲ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿಯ ''''''''ಬಲವರ್ಧನಗಾಗಿ ಭೀಮ ಸಮಾವೇಶ''''''''ವನ್ನು ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮತ್ತು ಜಿಲ್ಲಾಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ಉದ್ಘಾಟಿಸಿದರು.

ಎಲ್ಲ ಸಮಾವೇಶಗಳಂತೆ ಇದು ಸಾಮಾನ್ಯ ಭಾಷಣದ ಸಮಾವೇಶವಾಗದೆ ಒಂದು ವಿಶೇಷವಾದ ಅರ್ಥಪೂರ್ಣ ಪ. ಜಾತಿಯ ಸಮಾವೇಶವಾಗಿತ್ತು. ಸಮಾವೇಶದಲ್ಲಿ ಉದ್ಘಾಟನೆಗೊಂಡ ನಂತರ ಒಂದು ಸಭಾಂಗಣದಲ್ಲಿ ದೊಡ್ಡದಾಗಿ ಅಳವಡಿಸಲಾದ ಎಲ್.ಇಡಿ ಪರದೆಯ ಮೇಲೆ ಚಿತ್ರ ಮತ್ತು ಸಂದರ್ಭ ಸನ್ನಿವೇಶಗಳ ವಿವರಣೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಅವರ ವಿವರಣೆಯ ಮೂಲಕ ಇತಿಹಾಸದ ದಾಖಲೆ ಸಾಹಿತ್ಯ, ಸತ್ಯ ಘಟನೆಗಳು ತೆರೆದುಕೊಳ್ಳಲಾರಂಭಿಸಿತು. ಸ್ವತಂತ್ರ ಪೂರ್ವದಿಂದಲೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಎಲ್ಲಾ ಹಂತದಲ್ಲೂ ಆದ ಮೋಸ ಮತ್ತು ಅವಮಾನಗಳನ್ನು ಮಾಡಿದ ಕಾಂಗ್ರೆಸ್ ನ ನಿಜಬಣ್ಣ ಅಲ್ಲಿ ಬಯಲು ಮಾಡಲಾಗಿತ್ತು. ಸ್ವತಂತ್ರ ನಂತರ ಮತ್ತು ಇಂದಿನ ತನಕ ಕಾಂಗ್ರೆಸ್ ಸರ್ಕಾರವು ಅಂಬೇಡ್ಕರ್ ಅವರನ್ನು ನಡೆಸಿಕೊಂಡು ರೀತಿ ಮತ್ತು ಪ. ಜಾತಿಯವರಿಗೆ ಮೋಸ ಮಾಡಿದ ಅನ್ಯಾಯಗಳನ್ನು ಸರಮಾಲೆಯನ್ನು ಅನಾವರಣಗೊಳಿಸಲಾಯಿತು.

ಶಾಸಕ ಶ್ರೀವತ್ಸ ಮಾತನಾಡಿ, ಕಾಂಗ್ರೆಸ್ ಪ. ಜಾತಿಗೆ ಮಾಡಿದ ಈ ಅನ್ಯಾಯವನ್ನು ಇಂದಿನ ಯುವಕರಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮನೆ ತಲುಪಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಈ ಅಧ್ಯಾಯನವೂ ಇಲ್ಲಿಯೇ ನಿಲ್ಲಕೂಡದು, ಇದೇ ರೀತಿಯ ಸತ್ಯಂ ಶಿವ ಗಳನ್ನು ನೀವೆಲ್ಲರೂ ಅಧ್ಯಯನ ಮಾಡುವಂಥವರಾಗಬೇಕೆಂದು ತಿಳಿಸಿದರು.

ಸಮಾವೇಶದಲ್ಲಿ ಎಸ್. ಮಹದೇವಯ್ಯ. ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್. ಪರಮಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಸೋಮಸುಂದರ್, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಸಿ.ಎಂ. ಮಹಾದೇವಯ್ಯ, ಈಶ್ವರ್, ಮಹೇಶ್ ಮಡವಾಡಿ, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್. ಡಾ. ರೇವಣ್ಣ, ಮಾಜಿ ಉಪಮೇಯರ್‌ ಶೈಲೇಂದ್ರ, ಡಾ. ಅಶ್ವಿನಿ ಶರತ್, ವೇದಾವತಿ, ಶಾರದಮ್ಮ ಇದ್ದರು.