ತೊರಲಕ್ಕಿ ಗ್ರಾಮದಲ್ಲಿ ಕಲ್ಯಾಣಮಂಟಪ: ಭರವಸೆ

| Published : May 21 2024, 12:39 AM IST

ಸಾರಾಂಶ

ತೊರಲಕ್ಕಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಒಟ್ಟುಗೂಡಿ ಈ ಜಾತ್ರೆ ನಡೆಸುವುದು ಶ್ಲಾಘನೀಯ. ನೂಟುವೆ ಗ್ರಾಪಂ ಪ್ರಮುಖ ಕೇಂದ್ರ ತೊರಲಕ್ಕಿಯಾಗಿದ್ದು ಇದು ವಾಣಿಜ್ಯ ಕೇಂದ್ರವೂ ಆಗಿದೆ.

ಕನ್ನಡಪ್ರಭ ವಾರ್ತೆ ಟೇಕಲ್

ಇಲ್ಲಿಯ ತೊರಲಕ್ಕಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯಂತೆ ಕಲ್ಯಾಣಮಂಟಪ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡರು ಭರವಸೆ ನೀಡಿದರು.

ಅವರು ಟೇಕಲ್‌ನ ತೊರಲಕ್ಕಿ ಗ್ರಾಮದಲ್ಲಿ ೪೪ನೇ ವರ್ಷದ ಪಲ್ಲಕ್ಕಿಗಳು ಹಾಗೂ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಹಿರಿಯರು ಗ್ರಾಮಗಳಲ್ಲಿ ಹಾಕಿ ಕೊಟ್ಟಿರುವ ಹಲವಾರು ಶಾಸ್ತ್ರ, ಸಂಪ್ರದಾಯಗಳನ್ನು ತೊರಲಕ್ಕಿ ಗ್ರಾಮಸ್ಥರು ೪೪ ವರ್ಷದಿಂದ ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ ಎಂದರು.

ಭಾವೈಕ್ಯತೆ ಸಾರುವ ಜಾತ್ರೆ

ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಒಟ್ಟುಗೂಡಿ ಈ ಜಾತ್ರೆ ನಡೆಸುವುದು ಶ್ಲಾಘನೀಯ. ನೂಟುವೆ ಗ್ರಾ.ಪಂ.ಪ್ರಮುಖ ಕೇಂದ್ರ ತೊರಲಕ್ಕಿ ಗ್ರಾಮ ಇಲ್ಲಿ ದಿನವೊಂದಕ್ಕೆ ಒಂದು ಸಾವಿರ ಜನ ವ್ಯಾಪಾರ ವಹಿವಾಟು ನಡೆಸುತ್ತಾರೆ. ನಾವು ತಾ.ಪಂ.ನಿಂದ ಈ ಕ್ಷೇತ್ರದಿಂದ ಜಯಗಳಿಸಿದ್ದು, ನಮ್ಮ ಪತ್ನಿ ರತ್ನಮ್ಮನಂಜೇಗೌಡರು ಇದೇ ಕ್ಷೇತ್ರದಿಂದ ಜಿ.ಪಂ.ನಲ್ಲಿ ಗೆಲುವು ಸಾಧಿಸಿ ಈ ಜನರ ಆಶೀರ್ವಾದದಿಂದ ಜಿ.ಪಂ.ಅಧ್ಯಕ್ಷರಾಗಿದ್ದರು. ಈ ಭಾಗದ ಜನರು ನಮಗೆ ಹೆಚ್ಚು ಅವಕಾಶ ನೀಡಿದ್ದಾರೆ ಎಂದರು.

ತೊರಲಕ್ಕಿ ಗ್ರಾಮದಲ್ಲಿ ಆಸ್ಪತ್ರೆಯ ಅಭಿವೃದ್ಧಿ ನೂಟುವೆ ಗ್ರಾ.ಪಂ.ವತಿಯಿಂದ ರಸ್ತೆ ಪಕ್ಕದಲ್ಲಿ ಸುಮಾರು ೨೦ ಅಂಗಡಿ ಮಳಿಗೆಗಳು ಕಟ್ಟಿರುವುದು ಶಾಲೆ ಮೂರರಿಂದ ನಾಲ್ಕು ಕೋಟಿ ಅಂದಾಜಿನಲ್ಲಿ ಪ್ರೌಢಶಾಲೆ ಕಟ್ಟಡ ಅಭಿವೃದ್ಧಿ ಯೋಜನೆ, ಇದೇ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಆಯ್ಕೆಯಾಗಿದೆ.

ಈಗ ನಮ್ಮದೇ ಸರ್ಕಾರವಿದ್ದು ಮಾಲೂರು ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರ ಮಾಡಲಾಗುವುದು. .

ಅದ್ಧೂರಿ ಜಾತ್ರಾ ಮಹೋತ್ಸವಈ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಿ, ಸಾಕಮ್ಮದೇವಿ, ಗಂಗಮ್ಮದೇವಿ, ಮಾರಮ್ಮದೇವಿ, ಮತ್ತು ಅಭಯ ಆಂಜನೇಯಸ್ವಾಮಿ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ದೀಪೋತ್ಸವ ಮತ್ತು ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರು ಟಿ.ಎಂ.ಅಶೋಕಕುಮಾರ್, ಗ್ರಾ.ಪಂ.ಸದಸ್ಯ ಕೆ.ಎಸ್.ವೆಂಕಟೇಶ, ನೂಟುವೆ ಗ್ರಾ.ಪಂ.ಅಧ್ಯಕ್ಷರಾದ ನಗೀನಾಖಾನಂಏಜಾಜ್, ನೂಟುವೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ವೈ.ಈರೇಗೌಡ, ಯುವಮುಖಂಡ ಸುನಿಲ್‌ನಂಜೇಗೌಡ, ಉಪಾಧ್ಯಕ್ಷೆ ರಾಧಮ್ಮಪುಟ್ಟಪ್ಪ, ಗ್ರಾ.ಪಂ.ಸದಸ್ಯ ಮಂಜುನಾಥ, ಡೇರಿ ಅಧ್ಯಕ್ಷ ಟಿ.ಸಿ.ಜಗದೀಶ, ಹಳೇ ವಿದ್ಯಾರ್ಥಿ ಸಂಘದ ಶ್ರೀನಿವಾಸ, ಗ್ರಾಮದ ಯುವಕರಾದ ಸುನಿಲ್, ವಿಜಯಕಕುಮಾರ್, ನವೀನ್, ಆನೇಪುರ ಹನುಮಂತಪ್ಪ, ಮಾಸ್ತಿ ಪಿಐ ರಾಮಪ್ಪಗುತ್ತೇದಾರ್, ಸತೀಶಬಾಬು, ಮುಂತಾದವರು ಉಪಸ್ಥಿತರಿದ್ದರು.