ಸಾರಾಂಶ
ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಾತಿ ಮತ್ತು ವೃತ್ತಿ ಮಾರ್ಗದರ್ಶನದಲ್ಲಿ ಅನುಭವಿ ವೃತ್ತಿಪರರಾಗಿರುವ ಚಂದನ್ ಆಗಮಿಸಿ ಮಾಹಿತಿ ಹಂಚಿಕೊಂಡರು. ಕಾಲೇಜಿನ ಅಂತಿಮ ವರ್ಷದ 120 ಬಿಕಾಂ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ಆಶ್ರಯದಲ್ಲಿ ಮಂಗಳವಾರ ಉದ್ಯೋಗಕ್ಕೆ ಅರ್ಜಿ ಬರವಣಿಗೆ ಮತ್ತು ಅಣಕು ಸಂದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಾತಿ ಮತ್ತು ವೃತ್ತಿ ಮಾರ್ಗದರ್ಶನದಲ್ಲಿ ಅನುಭವಿ ವೃತ್ತಿಪರರಾಗಿರುವ ಚಂದನ್ ಆಗಮಿಸಿ ಮಾಹಿತಿ ಹಂಚಿಕೊಂಡರು. ಕಾಲೇಜಿನ ಅಂತಿಮ ವರ್ಷದ 120 ಬಿಕಾಂ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಚಂದನ್ ಅವರು ಪರಿಣಾಮಕಾರಿ ಅರ್ಜಿ ಮತ್ತು ವೈಯುಕ್ತಿಕ ಮಾಹಿತಿಗಳನ್ನು ಬರೆಯಲು ಸಲಹೆಗಳು ಮತ್ತು ಮಾರ್ಗಸೂಚನೆಗಳನ್ನು ನೀಡಿದರು. ನಿರ್ದಿಷ್ಟ ಉದ್ಯೋಗಗಳಿಗೆ ಅಗತ್ಯವಾಗಿ ನೀಡಬೇಕಾದ ವೈಯಕ್ತಿತ ವಿವರಣೆಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳು, ಸಾಧನೆಗಳು ಮತ್ತು ಅನುಭವಗಳನ್ನು ಹೇಗೆ ಆದ್ಯತೆ ನೀಡಿ ಉಲ್ಲೇಖಿಸಬೇಕು ಎಂದವರು ಉದಾಹರಣೆ ನೀಡಿದರು.ನಂತರ ವಿದ್ಯಾರ್ಥಿಗಳು ನೈಜ ಉದ್ಯೋಗ ಸಂದರ್ಶನಗಳನ್ನು ಅನುಕರಿಸುವ ಅಣಕು ಸಂದರ್ಶನಗಳಲ್ಲಿ ಭಾಗವಹಿಸಿದರು. ಸಂದರ್ಶನದಲ್ಲಿಯೂ ಚಂದನ್ ಅವರು ಸಂವಹನ ಕೌಶಲ್ಯ, ದೇಹ ಭಾಷೆಗಳ ಕುರಿತು ಪ್ರತಿಕ್ರಿಯೆಯನ್ನು ನೀಡಿದರು. ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಕ್ಲಿಷ್ಟ ಸಂದರ್ಭಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ವಿದ್ಯಾರ್ಥಿಗಳು ಕಲಿತರು.