ಸಾರಾಂಶ
ಶ್ರವಣ ದೋಷ ಉಳ್ಳವರು ಮತ್ತು ದೃಷ್ಟಿ ಹೀನರು ಸಂಗೀತ ವಾದ್ಯಗಳನ್ನು ನುಡಿಸುವುದು, ಹಾಡುವುದು ಮತ್ತು ಲಯವನ್ನು ಕೇಳಲು ಸಾಧ್ಯವಾಗದೇ ಇದ್ದರೂ ಕುಣಿಯುವುದನ್ನು ನೋಡುವುದು ಬೆರಗುಗೊಳಿಸಿತು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಶ್ರವಣ ದೋಷ ಮತ್ತು ಮಾತನಾಡುವ ಅಸಾಮರ್ಥ್ಯದ ಮಕ್ಕಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ‘ಸಮರ್ಥನಂ’ ಇದರ ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದ ವಿಶಿಷ್ಟ ದೃಶ್ಯ - ಶ್ರವಣ ಕಾರ್ಯಕ್ರಮಕ್ಕೆ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ದರ್ಬಾರ್ ಸಾಕ್ಷಿಯಾಯಿತು.ಶ್ರವಣ ದೋಷ ಉಳ್ಳವರು ಮತ್ತು ದೃಷ್ಟಿ ಹೀನರು ಸಂಗೀತ ವಾದ್ಯಗಳನ್ನು ನುಡಿಸುವುದು, ಹಾಡುವುದು ಮತ್ತು ಲಯವನ್ನು ಕೇಳಲು ಸಾಧ್ಯವಾಗದೇ ಇದ್ದರೂ ಕುಣಿಯುವುದನ್ನು ನೋಡುವುದು ಬೆರಗುಗೊಳಿಸಿತು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, ಈ ದಿನವು ಇಡೀ ಸಂಸ್ಥೆಗೆ ವಿಶೇಷ ದಿನವಾಗಿದೆ. ಏಕೆಂದರೆ ನಾವು ಬೆಂಗಳೂರಿನಿಂದ ವಿಶೇಷ ವ್ಯಕ್ತಿಗಳ ವಿಶೇಷ ಪ್ರದರ್ಶನವನ್ನು ನೋಡಿದ್ದೇವೆ. ಈ ಕಾರ್ಯಕ್ರಮವು ಅಸ್ತಿತ್ವದಲ್ಲಿರುವ ಮತ್ತೊಂದು ಪ್ರಪಂಚದ ನಮ್ಮ ದೃಷ್ಟಿಯನ್ನು ತೆರೆಯಬೇಕು ಎಂದರು.ಸಮರ್ಥನಂ ಸಂಸ್ಥೆಯ ರವಿನಂದನ್ ಭಟ್, ಸಂಸ್ಥೆಯ ಪರಿಕಲ್ಪನೆಯನ್ನು ಸಭೆಗೆ ಪರಿಚಯಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್, ವಿದ್ಯಾರ್ಥಿ ದರ್ಬಾರ್ ಸಂಚಾಲಕ ಡಾ. ನಿತ್ಯಾನಂದ ಶೆಟ್ಟಿ, ಪ್ರಾಧ್ಯಾಪಕರಾದ ಅನ್ನಮ್ಮ, ಡಾ. ಸುರೇಖಾ ಭಟ್ ಮತ್ತು ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕಾರ್ತಿಕ್ ನಾಯಕ್, ಸಮರ್ಥನಂ ಸಂಸ್ಥೆಯ ಟ್ರಸ್ಟಿ ವಸಂತಿ ಸವಣೂರು, ವ್ಯವಸ್ಥಾಪಕಿ ತ್ರಿವೇಣಿ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿನಿ ಶಿಖಾ ಶೆಟ್ಟಿ ಉಪಸ್ಥಿತರಿದ್ದರು.