ಸಾರಾಂಶ
ಸಂಯುಕ್ತ ಸಹಕಾರಿ ಕಾಲಕಾಲಕ್ಕೆ ರೂಪಿಸುವ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ ಕಾರ್ಯನಿರ್ವಹಿಸಬೇಕು.
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಹೆಬಳೆಯ ಕಾಮಧೇನು-ಕಲ್ಪತರು ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ. ನಂಜನಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸೌಹಾರ್ದ ಪತ್ತಿನ ಸಹಕಾರಿ ಸಂಘಗಳು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಾಲಕಾಲಕ್ಕೆ ರೂಪಿಸುವ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿ 6500 ಸೌಹಾರ್ದ ಸಹಕಾರಿಗಳಿದ್ದು, ಇವುಗಳನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘ ನಿಯಂತ್ರಿಸುತ್ತಿದೆ. ಸೌಹಾರ್ದ ಕಾಯ್ದೆ ಉಲ್ಲಂಘಿಸುವ ಸೌಹಾರ್ದ ಸಹಕಾರಿ ಸಂಘಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕಾಮಧೇನು-ಕಲ್ಪತರು ಸೌಹಾರ್ದ ಸಹಕಾರಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಸ್ತಿಮಕ್ಕಿಯ ಶಾಖೆಯನ್ನು ಉದ್ಘಾಟಿಸಿರುವುದು ಖುಷಿ ತಂದಿದೆ ಎಂದರು. ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮೋಹನದಾಸ ನಾಯಕ, ಕಾಮಧೇನು-ಕಲ್ಪತರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿನೋದ ಪ್ರಭು ಮಾತನಾಡಿದರು. ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ಕಚೇರಿ ವ್ಯವಸ್ಥಾಪಕ ಬಸವರಾಜ,ಕಾಮಧೇನು-ಕಲ್ಪತರು ಸಹಕಾರಿ ಸಂಘದ ನಿರ್ದೇಶಕರಾದ ಪುಂಡಲೀಕ ದೇವಡಿಗ,ಮಾದೇವ ಗೊಂಡ, ಜಯಾ ನಾಯ್ಕ, ದಿವ್ಯಾ ಪ್ರಭು,ಅಬ್ದುಲ್ ಮಜೀದ್,ಹಸನ್ ಇಬ್ರಾಹಿಂ,ಕಟ್ಟಡ ಮಾಲಿಕ ಆನಂದ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ವೆಂಕಟ್ರಮಣ ದೇವಡಿಗ ಮುಂತಾದವರಿದ್ದರು. ಬಸ್ತಿಮಕ್ಕಿ ಶಾಖಾ ವ್ಯವಸ್ಥಾಪಕಿ ಸ್ವಾತಿ ನಾಯ್ಕ ಸ್ವಾಗತಿಸಿದರು. ಸಹಕಾರಿಯ ಉಪಾಧ್ಯಕ್ಷ ಯುವರಾಜ ದೇವಡಿಗ ನಿರೂಪಿಸಿ ವಂದಿಸಿದರು.13ಬಿಕೆಲ್3ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ. ನಂಜನಗೌಡ ಅವರನ್ನು ಸನ್ಮಾನಿಸಿ ಗೌರವಿಸಿರುವುದು.