ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕನ್ನಡ ತಮಿಳಿನಿಂದ ಹುಟ್ಟಿರುವುದು ಎಂದು ಹೇಳಿಕ ನೀಡಿದ ಚಿತ್ರನಟ ಕಮಲ್ ಹಾಸನ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕರವೇ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಕೆ.ಎಸ್.ಆರ್.ಟಿ.ಸಿ ವೃತ್ತದಲ್ಲಿ ಕಮಲ್ ಹಾಸನ್ ಭಾವಚಿತ್ರವನ್ನು ತುಳಿದು ಹಾಕುವ ಬ್ಯಾನರ್‌ನನ್ನು ಸುಡಲು ಮುಂದಾದಾಗ ಮಧ್ಯಪ್ರವೇಶಿಸಿದ ಪೊಲೀಸರು ತಡೆಗಟ್ಟಿದರು. ತಕ್ಷಣ ನಟ ಕಲ್ ಹಾಸನ್ ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಭಾಷಾ ಸಮಾನತೆ ಕಾಣಬೇಕುಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕನ್ನಡ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ಚೆನ್ನೈನಲ್ಲಿ ನೀಡಿರುವ ಹೇಳಿಕೆ ಖಂಡನೀಯ. ಕನ್ನಡ, ತಮಿಳು, ತೆಲುಗು ಭಾಷೆಗಳು ದ್ರಾವಿಡ ಕುಟುಂಬದ ಭಾಷೆಗಳು. ಹೀಗಾಗಿ ಸಮಾನತೆಯನ್ನು ಕಾಣಬೇಕಿದೆ, ಆದರೆ ಒಂದು ಭಾಷಿಗರನ್ನ ಓಲೈಕೆ ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ತಗ್‌ಲೈಫ್’ ಬಿಡುಗಡೆಗೆ ವಿರೋಧಕೂಡಲೇ ಕನ್ನಡಿಗರ ಕ್ಷಮೆಯನ್ನು ನಟ ಕಮಲ್ ಹಾಸನ್ ಕೇಳಬೇಕು, ಇಲ್ಲದ ಪಕ್ಷ ದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಮಲ್ ಹಾಸನ್ ನಟನೆಯ ಚಿತ್ರ ಜೂ.೫ ರಂದು ಹಾಸನ್ ನಟಿಸಿರುವ ಹೊಸ ಚಿತ್ರ ತಗ್‌ಲೈಫ್ ನಿಗದಿಯಾಗಿದೆ. ರಾಜ್ಯದಲ್ಲಿ ಬಿಡುಗಡೆಯಾಗದಂತೆ ತಡೆಯುವ ನಿರ್ಧಾರ ಕರವೇ ಕೈಗೊಂಡಿದೆ.ಕರವೇ ಸಂಘಟನೆಯ ಪದಾಧಿಕಾರಿ ವಿ.ಮುನಿರಾಜು, ತಾಲೂಕು ಅಧ್ಯಕ್ಷರಾದ ಮಾಲೂರು ಎಂ.ಶ್ರೀನಾವಾಸ, ಕೋಲಾರ ಶಶಿಕುಮಾರ, ಬಂಗಾರಪೇಟೆ ರಾಮಪ್ರಸಾದ್, ಮಹಬೂಬ್, ಮಂಜುನಾಥ, ಶಂಕರ್‌ರೆಡ್ಡಿ, ಡಿ.ವಿ.ಮಂಜುನಾಥ, ಹುಸೇನ್, ಕೋದಂಡರಾಮಯ್ಯ, ಗಣೇಶ್, ಲೋಕೇಶ್, ಕೆ.ನವೀನ್, ಸಂತೋಷ್, ರಾಮಕೃಷ್ಣಪ್ಪ, ನವೀನ್, ರಂಜಿತ್ ಇದ್ದರು.