ಸಾರಾಂಶ
ನಟ ಕಮಲ್ ಹಾಸನ್ ಗೆ ತಮಿಳು ಭಾಷೆ ಮೇಲೆ ಪ್ರೀತಿ ಇರಬಹುದು ಆದರೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಂಡಿರುವುದು ತಪ್ಪು,
ನೆಲಮಂಗಲ/ದಾಬಸ್‍ಪೇಟೆ
ನಟ ಕಮಲ್ ಹಾಸನ್ ವಿಚಾರಲ್ಲಿ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಜನರ ಅಪೇಕ್ಷೆ ಕೂಡ ಅದೆ ಇತ್ತು. ನ್ಯಾಯಾಲಯದ ತೀರ್ಪಿನಂತೆ ಕಮಲ್ ಹಾಸನ್ ಕರ್ನಾಟಕದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.ನೆಲಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ಕಮಲ್ ಹಾಸನ್ ಗೆ ತಮಿಳು ಭಾಷೆ ಮೇಲೆ ಪ್ರೀತಿ ಇರಬಹುದು ಆದರೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಂಡಿರುವುದು ತಪ್ಪು, ನಾನು ಈಗಾಗಲೇ ಕ್ಷಮೆಯಾಚನೆ ಮಾಡಬೇಕೆಂದು ಹೇಳಿದ್ದೇ ಜನರ ಅಪೇಕ್ಷೆಯೇ ಅದೇ ಆಗಿತ್ತು. ಸರಿಯಾದ ಮಾಹಿತಿ ಇಲ್ಲದೇ ಹೇಳಿಕೆ ನೀಡಿರುವುದು ಅಕ್ಷ್ಯಮ್ಮ ಅಪರಾಧ, ಇನ್ನಾದರೂ ಉದ್ದಟನ ಬಿಟ್ಟು ರಾಜ್ಯದ ಜನತೆಯ ಕ್ಷಮೆಯಾಚಿಸಿ ಆಗಿರುವ ತಪ್ಪನ್ನು ತಿದ್ದುಕೊಂಡು ಸರಿದಾರಿಯಲ್ಲಿ ನಡೆಯಬೇಕು ಎಂದರು.ಪೋಟೋ 8 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))