ಕಮಲ್‌ ತಬ್ಬಿಕೊಂಡ್ರು, ನಾನು 3 ದಿನ ಸ್ನಾನ ಮಾಡಲಿಲ್ಲ : ಶಿವಣ್ಣ

| N/A | Published : May 29 2025, 12:14 AM IST / Updated: May 29 2025, 06:41 AM IST

ಕಮಲ್‌ ತಬ್ಬಿಕೊಂಡ್ರು, ನಾನು 3 ದಿನ ಸ್ನಾನ ಮಾಡಲಿಲ್ಲ : ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಕಮಲ್‌ ಹಾಸನ್‌ ಅವರನ್ನು ಮೊದಲ ಸಲ ಭೇಟಿಯಾದಾಗ ಅವರು ಶೇಕ್‌ ಹ್ಯಾಂಡ್‌ ಕೊಟ್ಟರು. ನಾನು ಹಗ್‌ ಸಿಗಬಹುದಾ ಅಂತ ಕೇಳಿದೆ. ಕಮಲ್‌ ಅಪ್ಪುಗೆ ನೀಡಿದರು. ಇದಾದ ಮೇಲೆ ನಾನು 3 ದಿನ ಸ್ನಾನ ಮಾಡಿರಲಿಲ್ಲ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

  ಬೆಂಗಳೂರು : ‘ನಾನು ಕಮಲ್‌ ಹಾಸನ್‌ ಅವರನ್ನು ಮೊದಲ ಸಲ ಭೇಟಿಯಾದಾಗ ಅವರು ಶೇಕ್‌ ಹ್ಯಾಂಡ್‌ ಕೊಟ್ಟರು. ನಾನು ಹಗ್‌ ಸಿಗಬಹುದಾ ಅಂತ ಕೇಳಿದೆ. ಕಮಲ್‌ ಅಪ್ಪುಗೆ ನೀಡಿದರು. ಇದಾದ ಮೇಲೆ ನಾನು 3 ದಿನ ಸ್ನಾನ ಮಾಡಿರಲಿಲ್ಲ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಥಗ್‌ ಲೈಫ್‌’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್‌ ಕುಮಾರ್‌ ಮಾತನಾಡಿದರು.

‘ನನ್ನ ಬಾಲ್ಯದ ದಿನಗಳಲ್ಲಿ ನಾನು ಕಮಲ್‌ ಹಾಸನ್‌ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅದೊಂದು ಬಾರಿ ಅವರು ನಮ್ಮ ಮನೆಗೆ ಬರುವ ಸಂದರ್ಭ ಬಂತು. ತಂದೆ ಡಾ.ರಾಜ್ ಕುಮಾರ್‌ ಅವರೊಂದಿಗೆ ಕಮಲ್‌ ಅವರು ಒಂದಿಷ್ಟು ಹೊತ್ತು ಮಾತನಾಡಿದರು. 

ನಾನಾಗ ಎವೆ ಮುಚ್ಚದಂತೆ ಕಮಲ್‌ ಅವರನ್ನೇ ನೋಡುತ್ತಿದ್ದೆ. ತಂದೆ ಕಮಲ್‌ ಅವರಿಗೆ ನನ್ನನ್ನು ಪರಿಚಯಿಸಿದರು. ಆ ಹೊತ್ತಿಗೆ ಅವರು ತಬ್ಬಿಕೊಂಡಾಗ ನಾನು ಅವರ ದೇಹದ ಪರಿಮಳವನ್ನು ಎಂಜಾಯ್‌ ಮಾಡಿದ್ದೆ. ಅವರ ದೇಹದ ಪರಿಮಳ ಹೋಗಬಾರದು ಅನ್ನುವ ಕಾರಣಕ್ಕೆ ಮೂರು ದಿನ ಸ್ನಾನ ಮಾಡಿರಲಿಲ್ಲ. ನಾನು ಅವರ ಅಷ್ಟು ದೊಡ್ಡ ಅಭಿಮಾನಿ. ಕಮಲ್‌ ಅವರ ಸಿನಿಮಾಗಳನ್ನು ಮೊದಲ ದಿನ ಮೊದಲ ಶೋ ಅನ್ನೇ ನೋಡುತ್ತಿದ್ದೆ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಸರ್ಜರಿಗಾಗಿ ಮಿಯಾಮಿಯಲ್ಲಿದ್ದೆ. ಕಮಲ್‌ ಸರ್‌ ನನಗೆ ಕರೆ ಮಾಡಿ ಕುಶಲ ವಿಚಾರಿಸಿದರು. ಆ ಸಮಯ ಅವರು ಶಿಕಾಗೋದಲ್ಲಿದ್ದರು. ಅವರ ಆ ಕರೆ ನನಗೆ ಬಹಳ ಖುಷಿ ಕೊಟ್ಟಿತು’ ಎಂದೂ ಹೇಳಿದರು.

Read more Articles on