ಸಾರಾಂಶ
ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವು ಕಡೆ ಹಳ್ಳಿಗಳು ತುಂಬಿ ಹರಿಯುತ್ತಿರುವೆ. ಜಮೀನುಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ಸೆತುವೆಗಳು ಮುಳಗಿವೆ. 
ಕನ್ನಡ ಪ್ರಭ ವಾರ್ತೆ ಕಮಲಾಪುರ
ಕಮಲಾಪುರ ತಾಲೂಕಿನಲ್ಲಿ ಮಳೆ ಬಿರುಸಿನಿಂದ ಸುರಿದು ಜನರು ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವು ಕಡೆ ಹಳ್ಳಿಗಳು ತುಂಬಿ ಹರಿಯುತ್ತಿರುವೆ. ಜಮೀನುಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ಸೆತುವೆಗಳು ಮುಳಗಿವೆ. ಇನ್ನೂ ಕೆಲವೆಡೆ ಗ್ರಾಮಗಳು ಸಂಪರ್ಕ ರಸ್ತಗಳು ಸಂಪೂರ್ಣ ಜಲಾವೃತಗೊಂಡಿದ್ದು ಜನರು ಪರದಾಡುತ್ತಿದ್ದಾರೆ.ತಾಲೂಕಿನ ಲಾಡಮುಗಳಿ, ಲೆಂಗಟಿ, ವಿಕೆ ಸಲಗರ ಮುದಡಗಾ ಸೆರಿದಂತೆ ಭಾರಿ ಮಳೆಯಾಗಿದೆ. ಕಾರಣ ರೈತರು ಹೊಲಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿಹೊಗಿ ಅಪಾರ ಪ್ರಮಾಣದ ರಸ್ತೆಗಳು, ಮೂಲ ಸವಲತ್ತಿನ ಯೋಜನೆಗಳಿಗೆ ಹಾನಿಯಾಗಿದೆ.
ಶಾಸಕ ಬಸವರಾಜ ಮತ್ತಿಮಡು ಮಳೆಯಿಂದ ಹಾನಿಪೀಡಿತ ಪ್ರದೇಶಗಳಲ್ಲಿ ಗುರುವಾರ ದಿನವಿಡೀ ಸುತ್ತಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದರು.ರೈತರು, ಸಾರ್ವಜನಿಕರ ಜೊತೆಗೆ ಅವಲೋಕಚಿಸಿ ಹನಿ ಮಾಹಿತಿ ಪಡೆದರು.ಸಂಕಷ್ಟ ಕೊಳಗಾದ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಯಾವುದೇ ಕಾರಣಕ್ಕೂ ಯಾರೂ ಕೂಡ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಅಭಯ ನೀಡಿದ್ದರು. ದಾಖಲೆ ಮಳೆಯಿಂದ ಅಪಾರ ನಷ್ಟವಾದ ರೈತರು . ಸಾರ್ವಜನಿಕರು ಸಂಕಷ್ಟಕ್ಕೆಸಿಲುಕಿದ್ದಾರೆ.
ಲಾಡಮುಗಳಿ, ವಿಕೆಸಲಗರ, ಲೆಂಗಟಿ, ಳಮುದ್ದುಡಗಾ, ಗ್ರಾಮಗಳಲ್ಲಿ ಬುಧವಾರ ಸುರಿದ ಮಳೆಯಿಂದ ರೈತರಿಗೆ ಫಲವತ್ತತೆ ಯಾದ ಜಮೀನಿನ ಮಣ್ಣು ಕೊಚ್ಚಿ ಹೋದ ಪರಿಣಾಮ ರೈತರಿಗೆ ಹೆಚ್ಚಿನ ಪ್ರಮಾಣ ನಷ್ಟವಾಗಿದೆ ಇಲ್ಲಿ ಆಗಿರುವ ಸಮಸ್ಯೆ ಹಾನಿ ಕುರಿತು ಸರ್ಕಾರ, ಸಂಬಂಧಿತ ಸಚಿವರ ಗಮನಕ್ಕೆ ತಂದು ಸಂತ್ರಸ್ತರಿಗೆ ಅಗತ್ಯ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.ಈ ಮಧ್ಯೆ ಸಹಾಯಕ ಆಯುಕ್ತರು, ಉಪ ಕೃಷಿ ಅಧಿಕಾರಿ ಪಾರ್ವತಿ, ಹಾಗೂ ಸಹಾಯಕ ಕೃಷಿ ಅಧಿಕಾರಿ ಚಂದ್ರಕಾಂತ್ ಜಿವಣಗಿ, ಅವರು ಸಹ ವಿವಿಧಡೆ ಹನಿ ಪೀಡಿತ ಪ್ರದೇಶಗಳಿಗೆ ತೆರಳಿ ಸ್ಥಿತಿ ಪರಿಶೀಲಿಸಿದರು.
ಹಾನಿ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪ ಗೌಡ, ಸತೀಶ್ ಸಿರೋಡೆ, ಹಣಮಂತ ಮಾಲಜಿ,ಶಿವರಾಜ ಮಾಲ್ಲಿ ಪಾಟೀಲ್, ಸತಿಶ್ ಪೂಜಾರಿ, ಬಾಬುರಾವ್ ಧಾಮ, ವಿನಯ್ ಮಠಪತಿ,ರಾಜು ಪೂಲೀಸ್ ಪಾಟೀಲ್ ಗ್ರಾಮಸ್ಥರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))