ಕಮಲಾಪುರ: ರೈತರಿಂದ ಭೂತಾಯಿಗೆ ವಿಶೇಷ ಪೂಜೆ

| Published : Jan 12 2024, 01:46 AM IST

ಕಮಲಾಪುರ: ರೈತರಿಂದ ಭೂತಾಯಿಗೆ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಎಳ್ಳು ಅಮಾವಾಸ್ಯೆ ನಿಮಿತ್ತ ಕೃಷಿಕರಿಂದ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಸಹಭೋಜನ.

ಕನ್ನಡಪ್ರಭ ವಾರ್ತೆ ಕಮಲಾಪುರ

ಭೂಮಿ ತಾಯಿಗೆ ಚರಕ ಚೆಲುವ ಎಳ್ಳಮಾವಾಸ್ಯ ಗುರುವಾರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅನ್ನದಾತರು ಭರ್ಜರಿ ತಯಾರಿಸಿ ಆಚರಿಸಿದರು.

ಬುಧವಾರ ರಾತ್ರಿ ಎಲ್ಲಾ ರೈತರ ಮನೆಯಲ್ಲಿ ಕಾಯಿಪಲ್ಲೆ ಸೂಸುವ ದಿನವಾಗಿದ್ದು, ಭರ್ಜರಿಯಾಗಿ ವಿವಿಧ ಕಾಯಿಪಲ್ಲೆ ಕಾಳುಗಳ ಖರೀದಿ ಮಾಡಿಕೊಂಡು ಬಂದು ಸಂಭ್ರಮ ಸಡಗರದಿಂದ ತಯಾರಿ ಮಾಡಿಕೊಂಡು ಹೊಲಗದ್ದೆಗೆ ಹೋಗಿದ್ದರು.

ವಿಶೇಷವಾದ ಬಜ್ಜಿ, ಕಡಬು, ಹೋಳಿಗೆ, ರೊಟ್ಟಿ, ಸಂಜೆ-ಜೋಳದ ರೊಟ್ಟಿ, ಶೇಂಗಾ, ಎಣ್ಣೆಗಾಯಿ ಪಲ್ಯ ಸೇರಿದ ಪಲ್ಯಗಳನ್ನು ಸತ್ತು ಪಡಿಸಿಕೊಂಡು ಪಂಡಿತಲ್ಯ ಮೆಂತೆ ತಿರುಗಿ ಕಡಲೆ ಪಲ್ಯ ಚಿರಕಿ ಪಲ್ಯ, ಹಸುರಗಾಯಿ ಪಾಲಕ್, ಬಜ್ಜಿ, ಹಸ್ರಾಣಿ, ಗಜರಿ ಅವರೆಕಾಯಿ ಮೆಣಸಿನಕಾಯಿ, ಕಡಲೆ, ತೊಗರಿ, ಸೇರಿದಂತೆ ವಿವಿಧ ಧಾನ್ಯ ಮತ್ತು ತರಕಾರಿ ಗಳಿಂದ ತಯಾರಿಸಿಕೊಂಡು ಗುರುವಾರ ಕುಟುಂಬ ಸಮೇತ ಎತ್ತಿನ ಬಂಡಿ ಹೊಡೆದುಕೊಂಡು ಹೊಲಕ್ಕೆ ಹೋಗಿ ಆನಂದಪಟ್ಟರು.

ಬೆಳೆದು ನಿಂತಿರೋ ಜೋಳ, ಕಡಲೆ ಸೇರಿ ಹಿಂಗಾರು ಬೆಳೆಯಲ್ಲಿ 5 ಕಲ್ಲಿನಿಂದ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜಿ ಸಲ್ಲಿಸಿ ಹುಲ್ಲು ಹೊಲ್ಲಿಗೋ ಚಲ್ಲ ಚಲ್ಲಂಬರಿಗೋ ಎಂದು ಹೇಳುತ್ತಾ ಹೊಲದಲ್ಲಿನ ಬೆಳೆಗಳಿಗೆ ಚರಗ ಚೆಲ್ಲಿಕೊಂಡು. ಬಳಿಕ ಹೊಲದಲ್ಲಿ ಎಲ್ಲರೂ ಸೇರಿ ಭೋಜನ ಮಾಡಿ ಸಂಭ್ರಮದಿಂದ ಆಚರಿಸಿದರು.