ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳ ಇತ್ತೀಚೆಗೆ ಸಂಪನ್ನಗೊಂಡಿತು.
ಮೂಲ್ಕಿ: ಕಂಬಳವು ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು ಕೃಷಿಕರು ಮತ್ತು ಅರಸರ ಭಾವನಾತ್ಮಕ ಕೊಂಡಿಯಾಗಿ ಕಂಬಳ ಕ್ರೀಡೆ ಧಾರ್ಮಿಕ ಹಿನ್ನೆಲೆಯೊಂದಿಗೆ ಆಯೋಜನೆಯಾಗಿದೆ. ಕರಾವಳಿಯಲ್ಲಿ ಮಾತ್ರ ಸಾಂಸ್ಕೃತಿಕ ವೈಭವ ಕಾಣಲು ಸಾಧ್ಯ. ದಕ ಜಿಲ್ಲೆಯವರು ಇಂದಿಗೂ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆಂದು ಶ್ರೀಕ್ಷೇತ್ರ ಹೊರನಾಡು ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.
ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ನಾಗಬನದಲ್ಲಿ ಅತ್ತೂರು ಬೈಲು ವೆಂಕಟರಾಜು ಉಡುಪರ ಪೌರೋಹಿತ್ಯದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದು ಬಳಿಕ ಆರಮನೆ ಬಸದಿ ಶ್ರೀ ಚಂದ್ರನಾಥ ಸ್ವಾಮಿ, ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಅರ್ಚಕ ಬಾಬು ಇಂದ್ರ ಹಾಗೂ ಉದಯ ಇಂದ್ರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ನಿಡೋಡಿ ಜಗನ್ನಾಥ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿ, ಅರಮನೆಯ ನಾಗಬನದ ಮತ್ತು ಬಸದಿ ಪೂಜಾ ಪ್ರಸಾದದೊಂದಿಗೆ ಅರಮನೆಯ ಧರ್ಮಚಾವಡಿಯಿಂದ ಕಂಬಳದ ಗದ್ದೆವರೆಗೆ ಎರು ಬಂಟ ಸಹಿತ ವಿಜೃಂಭಣೆಯ ಮೆರವಣಿಗೆ ಮೂಲಕ ಪ್ರಸಾದವನ್ನು ಕಂಬಳ ಗದ್ದೆಗೆ ಪ್ರೋಕ್ಷಣೆ ಮಾಡುದರೊಂದಿಗೆ ಕಂಬಳಕ್ಕೆ ಡಾ.ಜಿ.ಭೀಮೇಶ್ವರ ಜೋಷಿ ಚಾಲನೆ ನೀಡಿದರು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುನಾಡಿನಲ್ಲಿ ನಡೆಯುವ ಕಂಬಳದಲ್ಲಿ ಸಂಪ್ರದಾಯವಿದ್ದು ಜನರಲ್ಲಿ ಒಗ್ಗಟ್ಟನ್ನು ಮೂಡಿಸುವ ಕಾರ್ಯ ನಡೆಯುತ್ತಿದೆಯೆಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು,ಪಡುಪಣಂಬೂರು ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರಿ ದೇವಳದ ಮೊಕ್ತೇಸರ ರಂಗನಾಥ ಭಟ್, ಮುಲ್ಕಿ ಸಿಎಸ್‌ಐ ಚರ್ಚ್ ಸಭಾಪಾಲಕ ರೆ. ಸ್ಟೀವನ್ ಸರ್ವೋತ್ತಮ, ಪಕ್ಷಿಕೆರೆ ಪ್ಯಾರಿಸ್ ಪ್ರಿಸ್ಟ್ ಸಂತ ಜೂದರ ಯಾತ್ರಿಕ ಕೇಂದ್ರದ ರೆ.ಫಾ.ಅನಿಲ್ ಆಲ್‌ಫ್ರೆಡ್ ಡಿಸೋಜ, ಬೊಳ್ಳೂರು ಮುದರಿಸ್ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮೊಹಮ್ಮದ್ ಶರೀಫ್ ಅಷದಿ, ಮುಲ್ಕಿ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ಡ, ಉಡುಪಿ ಬಂಗೇರ ಆದಿ ಮೂಲಸ್ಥಾನದ ಅಧ್ಯಕ್ಷ ನಾಗೇಶ್ ಬಂಗೇರ ಲಚ್ಚಿಲ್, ವಕೀಲರಾದ ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್. ಎಸ್.ಸತೀಶ್ ಭಟ್ , ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಉತ್ರಂಜೆ, ಪವಿತ್ರೇಶ್ ಜೈನ್, ವಿಶ್ವಜಿತ್ ವರ್ಮ ಬೆಂಗಳೂರು, ಗೌತಮ್ ಜೈನ್ ಮುಲ್ಕಿ ಅರಮನೆ, ಆಶಾಲತಾ ಮುಲ್ಕಿಅರಮನೆ, ಅತ್ತೂರುಗುತ್ತು ಪ್ರಸನ್ನ ಎಲ್ ಚೆಟ್ಟಿ, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್,ಗುರುರಾಜ ಎಸ್ ಪೂಜಾರಿ ತೋಕೂರು, ಚಿತ್ತರಂಜನ್ ಭಂಡಾರಿ ಐಕಳ ಬಾವ, ಸವಿತಾ ಶರತ್ ಬೆಳ್ಳಾಯರು, ಬಂಕಿ ನಾಯಕರು, ಮೂಲ್ಕಿ ಪೋಲಿಸ್ ಠಾಣಾಧಿಕಾರಿ ಮಂಜುನಾಥ್ ಬಿ ಎಸ್, ಧ ಗ್ರಾ ಯೋಜನೆಯ ನಿಶ್ಮಿತಾ ಶೆಟ್ಟಿ, ಕಿಶೋರ್ ಸಾಲ್ಯಾನ್ ಬಿರುವೆರ್ ಕುಡ್ಲ, ಮಹೀಮ್ ಹೆಗ್ಡೆ,ಸುಧೇಶ್ ಕುಮಾರ್, ಅರಸು ಕಂಬಳ ನಿರ್ವಹಣಾ ಮಂಡಳಿಯ ಸದಸ್ಯರಾದ ವಿನೋದ್ ಸಾಲ್ಯಾನ್, ವಿಜಯ ಶೆಟ್ಟಿ ಕೊಲ್ನಾಡು, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಜನಪದ ವಿದ್ವಾಂಸ ಡಾ ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗ್ಯೆದರು. ವಿನೋದ್ ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಬಳಿಕ ಮುಲ್ಕಿ ಸೀಮೆ ಅರಸು ಕಂಬಳ ನಡೆಯಿತು.