ಕಂಬಿಬಾಣೆ 71ನೇ ವರ್ಷದ ಅದ್ಧೂರಿ ನವರಾತ್ರಿ ಉತ್ಸವಕ್ಕೆ ಯಕ್ಷಗಾನ ಕಾರ್ಯಕ್ರಮಕ್ಕೆ ಮಡಿಕೇರಿ ಶಾಸಕ

ಸುಂಟಿಕೊಪ್ಪ: ಕಂಬಿಬಾಣೆ 71ನೇ ವರ್ಷದ ಅದ್ಧೂರಿ ನವರಾತ್ರಿ ಉತ್ಸವಕ್ಕೆ ಯಕ್ಷಗಾನ ಕಾರ್ಯಕ್ರಮಕ್ಕೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಚಾಲನೆ ನೀಡಿದರು.ಭಾನುವಾರ ಸಂಜೆ ಕಂಬಿಬಾಣೆ ಗ್ರಾಮದಲ್ಲಿ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ 71 ನೇ ದಸಾರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ 71 ವರ್ಷಗಳಿಂದ ನಿರಂತರವಾಗಿ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಮಸ್ಥರು ತಮ್ಮ ಪ್ರಯತ್ನದಲ್ಲಿ ವರ್ಷದಿಂದ ವರ್ಷಕ್ಕೆ ಯಶಸ್ಸು ಕಾಣುತ್ತಿದ್ದು ಮುಂಬರುವ ವರ್ಷಗಳಲ್ಲಿಯೂ ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಕಂಬಿಬಾಣೆಯ ರಾಮ ಮಂದಿರದ ಪ್ರತಿ ವರ್ಷದ ಬೆಳವಣಿಗೆಗಳು ಇತರರಿಗೆ ಮಾದರಿ ಎಂದರು.

ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಶಶಿಕಾಂತ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯವು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಊರಿನವರ ಮತ್ತು ದಾನಿಗಳ ಮತ್ತು ಭಕ್ತಾದಿಗಳ ನೆರವಿನಿಂದ ಕಳೆದ 71 ವರ್ಷಗಳಿಂದ ದೇವಾಲಯದ ಚಿತ್ರಣವನ್ನು ವಿವರಿಸಿದರು.

ನಂತರ ಮಂಗಳೂರಿನ ಸುಘೋಷ ಪಾಂಚಜನ್ಯ ಯಕ್ಷ ನಾಟ್ಯಲಯ ವತಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.