ಇಲ್ಲಿನ ಜನರಲ್ ಕೆ..ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಫ್ರೀ ಕ್ವಾಟರ್ ಫೈನಲ್ ಪಂದ್ಯಗಳಲ್ಲಿಕಂಬೀರಂಡ, ಚೆಪ್ಪುಡಿರ, ಮೂಕೊಂಡ ಮತ್ತು ಪರದಂಡ ತಂಡಗಳು ಗೆಲುವು ಸಾಧಿಸಿದವು.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಜನರಲ್ ಕೆ..ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಫ್ರೀ ಕ್ವಾಟರ್ ಫೈನಲ್ ಪಂದ್ಯಗಳಲ್ಲಿ
ಕಂಬೀರಂಡ, ಚೆಪ್ಪುಡಿರ, ಮೂಕೊಂಡ ಮತ್ತು ಪರದಂಡ ತಂಡಗಳು ಗೆಲುವು ಸಾಧಿಸಿದವು. ಕಂಬೀರಂಡ 2 -1ರಿಂದ ಅರಮಣಮಾಡ ವಿರುದ್ಧ, ಚೆಪ್ಪುಡಿರ 2-0ಯಿಂದ ಕೋಳೆರ ವಿರುದ್ಧ, ಮೂಕೊಂಡ 5-1ರಿಂದ ಇಟ್ಟಿರ ವಿರುದ್ಧ, ಪರದಂಡ 4-2ರಿಂದ ಮಂಡೆಪಂಡ ವಿರುದ್ಧ ಜಯ ಸಾಧಿಸಿದವು. ಮಹಿಳಾ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಎರಡು ಪಂದ್ಯಗಳು ಬುಧವಾರ ನಡೆಯಲಿವೆ. ಬೆಳಿಗ್ಗೆ 10 15ಕ್ಕೆ ಕಂಬೀರಂಡ ಮತ್ತು ಅದೇಂಗಡ ತಂಡಗಳ ನಡುವೆ ಹಾಗೂ 11.45ಕ್ಕೆ ಶಿವಚಾಳಿಯಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ. ಉಳಿದಂತೆ ಮಹಿಳಾ ಹಾಕಿ ಪಂದ್ಯಗಳಲ್ಲಿ ಶಿವಳಿಯಂಡ 2-0ಯಿಂದ ತೆಕ್ಕಡ ವಿರುದ್ಧ, ನಾಪಂಡ 3-1ರಿಂದ ಮುಕ್ಕಾಟಿರ (ಹರಿಹರ) ವಿರುದ್ಧ, ಕೇಚೆಟ್ಟಿರ 5-0ಯಿಂದ ಪಾಂಡಿರ ವಿರುದ್ಧ, ಕಂಬಿರಂಡ 7-1ರಿಂದ ಚೇಯಂಡ ವಿರುದ್ಧ, ಚೆಪ್ಪುಡಿರ 3-1ರಿಂದ ಪಾಡೆಯಂಡ ವಿರುದ್ಧ, ಪೊನ್ನಚೆಟ್ಟಿರ 2-1ರಿಂದಕಲಿಯಂಡ ವಿರುದ್ಧ,ಕೇಚೆಟ್ಟಿರ 7-0 ಯಿಂದ ತಾತಂಡ ವಿರುದ್ಧ ಕಂಬೀರಂಡ 5-0ಯಿಂದ
ಚೆಪ್ಪುಡಿರ ವಿರುದ್ಧ ಗೆಲುವು ಸಾಧಿಸಿದವು.ಅದೇಂಗಡ ಮತ್ತು ಪೊನ್ನಚೆಟ್ಟಿರ ತಂಡಗಳು 1-1 ಸಮಬಲ ಸಾಧಿಸಿದವು. ನಂತರ ಟೈ
ಬ್ರೇಕರ್ ನಲ್ಲಿ ಅದೇಂಗಡ 3-1ರಿಂದ ಪೊನ್ನಚೆಟ್ಟೀರವಿರುದ್ಧ ಜಯ ಸಾಧಿಸಿತು.ತಾತಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ ನಲ್ಲಿ ತಾತಂಡ 1-0ಯಿಂದ ಕಾಯಪಂಡ ವಿರುದ್ಧ ಗೆಲವು ಸಾಧಿಸಿತು. ಇಂದಿನ ಫ್ರೀ ಕ್ವಾಟರ್ ಫೈನಲ್ ಪಂದ್ಯಗಳು:
9 ಕ್ಕೆ ಪಳಂಗಂಡ v/s ಪೆಮ್ಮಂಡ10.30ಕ್ಕೆ ಕುಲ್ಲೆಟಿರ v/S ನೆಲ್ಲಮಕ್ಕಡ
12 ಕ್ಕೆ .ಚೆಪ್ಪುಡಿರ v/s ಕಂಬಿರಂಡ1.30 ಕ್ಕೆ 4.ಮುಕೊಂಡ v/s ಪರದಂಡ