ಹೊಸಪೇಟೆ: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ವಾಲ್ಮೀಕಿ- ನಾಯಕ ಸಮಾಜದ ಮುಖಂಡರು, ಬಂಧುಗಳು ನಗರದಲ್ಲಿ ಸೋಮವಾರ ಬೃಹತ್ ಪಾದಯಾತ್ರೆ ನಡೆಸಿದರು.
ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮುಖ್ಯ ಮಸೀದಿ, ಪಾದಗಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನ, ಮೇನ್ ಬಜಾರ್ ಮೂಲಕ ವಡಕರಾಯ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಲಾಯಿತು.ಪಾದಯಾತ್ರೆ ಸಂದರ್ಭದಲ್ಲಿ ಮದಕರಿ ನಾಯಕ ವೃತ್ತದಲ್ಲಿ ಮದಕರಿ ನಾಯಕ ಪ್ರತಿಮೆಗೆ ಸಮಾಜದ ಮುಖಂಡರು. ಮಾಲಾರ್ಪಣೆ ಮಾಡಿದರು. ನಂತರ ನಗರದ ಹೊರವಲಯದ ಜಂಬುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಸಚಿವ ಸ್ಥಾನ ಲಭಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ವಡಕರಾಯಸ್ವಾಮಿ ದೇವಸ್ಥಾನದ ಬಳಿ ಮಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಯುವ ಶಾಸಕ ಹಾಗೂ ವಾಲ್ಮೀಕಿ ಸಮಾಜದ ಜನಾನುರಾಗಿ ಶಾಸಕರಾಗಿರುವ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡನ್ನು ಅವರು ಒತ್ತಾಯಿಸಿದರು.ಗೋಸಲ ಭರಮಪ್ಪ, ದೇವರಮನೆ ಶ್ರೀನಿವಾಸ, ಕಿನ್ನಾಳ ಹನುಮಂತ, ಜಂಬಾನಳ್ಳಿ ರಾಮಣ್ಣ, ಬಂಡೆ ರಂಗಪ್ಪ, ಕಿಚಿಡಿ ಶ್ರೀನಿವಾಸ, ಜಂಬಾನಳ್ಳಿ ವಸಂತ, ಕಿಚಿಡಿ ವಸಂತ, ಗುಂಡಿ ರಾಘವೇಂದ್ರ, ಬ್ಯಾಂಕ್ ಚಂದ್ರಪ್ಪ, ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ, ಕಟಿಗಿ ಜಂಬಯ್ಯ, ದುರುಗಪ್ಪ ಪೂಜಾರಿ, ಗುಜ್ಜಲ್ ಚಂದ್ರಶೇಖರ್, ಎನ್. ವೆಂಕಟೇಶ್, ನಗರಸಭೆ ಸದಸ್ಯ ಅಸ್ಲಂ ಮಾಳಿಗಿ, ತಾರಿಹಳ್ಳಿ ಜಂಬುನಾಥ, ಮುಖಂಡರಾದ ಕಟಗಿ ರಾಮಕೃಷ್ಣ, ಪಿ.ವಿ.ವೆಂಕಟೇಶ್, ಗುಜ್ಜಲ್ ಗಣೇಶ್, ಎಂ. ಕಿಶೋರಕುಮಾರ್, ಡಾ.ಪನ್ನಂಗಧರ, ಟಿ.ಹನುಮಂತಪ್ಪ, ಎರಿಸ್ವಾಮಿ, ಕಾಮಟಗಿ ನಾಗರಾಜ, ಎಸ್.ಗಾಳೆಪ್ಪ, ಎಂ.ಸಿ.ವೀರಸ್ವಾಮಿ, ದಾದಾಪೀರ್ ಸೇರಿದಂತೆ, ವಾಲ್ಮೀಕಿ-ನಾಯಕ ಸಮಾಜದ ಹಾಗೂ ವಿವಿಧ ಸಮಾಜಗಳ ಮುಖಂಡರು ಹಾಗೂ ಬಂಧುಗಳು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.