ಕಮತಗಿ ಹೊಳೆ ಹುಚ್ಚೇಶ್ವರ ವೈಭವದ ರಥೋತ್ಸವ

| Published : Feb 18 2025, 12:33 AM IST

ಸಾರಾಂಶ

ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಗಾರದ ಕಲಶ ಹಾಗೂ ಉತ್ಸವ ಮೂರ್ತಿ ಹೊತ್ತ ರಥೋತ್ಸವ ರಥ ಬೀದಿಯಲ್ಲಿ ನಾಡಿನ ಸಮಸ್ತ, ಹರಗುರು ಚರಮೂರ್ತಿಗಳು, ಪೂಜ್ಯರು ಮತ್ತು ಅಪಾರ ಭಕ್ತ ಸಮೂಹ ಮಧ್ಯೆ ಸೋಮವಾರ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕಮತಗಿ

ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಗಾರದ ಕಲಶ ಹಾಗೂ ಉತ್ಸವ ಮೂರ್ತಿ ಹೊತ್ತ ರಥೋತ್ಸವ ರಥ ಬೀದಿಯಲ್ಲಿ ನಾಡಿನ ಸಮಸ್ತ, ಹರಗುರು ಚರಮೂರ್ತಿಗಳು, ಪೂಜ್ಯರು ಮತ್ತು ಅಪಾರ ಭಕ್ತ ಸಮೂಹ ಮಧ್ಯೆ ಸೋಮವಾರ ವೈಭವದಿಂದ ಜರುಗಿತು.

ಚಿನ್ನದ ಕಲಶಹೊತ್ತ ರಥವು ರಥ ಬೀದಿಯಲ್ಲಿ ರಾಜ ನಡಿಯಲ್ಲಿ ಸಾಗುತ್ತಿದ್ದರೆ ಸಹಸ್ರಾರು ಭಕ್ತ ಸಮೂಹ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಸಮರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

ನಿಡಸೋಸಿ ನಿರಂಜನ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಇಳಕಲ್ಲ ಗುರುಮಹಾಂತ ಸ್ವಾಮೀಜಿ, ಗಂಗಾವತಿ ಕಲ್ಮಠ ಕೊಟ್ಟೂರು ಸ್ವಾಮೀಜಿ, ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಸ್ವಾಮೀಜಿ,ಗೋಕಾಕ ಮುರುಘರಾಜೇಂದ್ರ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತೇಶ್ವರ ಸ್ವಾಮೀಜಿ, ಕಮತಗಿ ಶಿವಕುಮಾರ ಸ್ವಾಮೀಜಿ, ಕಾಶೀನಾಥ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಹಾಗೂ ಕಮತಪುರ ಉತ್ಸವ ,ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಕಮತಗಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.