ದೊಡ್ಡಗಟ್ಟಿಗನಬ್ಬೆಯಲ್ಲಿ ಕನಕ ಜಯಂತಿ

| Published : Nov 19 2024, 12:45 AM IST

ಸಾರಾಂಶ

ಹೊಸಕೋಟೆ: ಕನಕದಾಸರು ಸಮಾಜ ಸುಧಾರಕರು, ಸಮಾಜದಲ್ಲಿ ಸಮಾನತೆಯ ಸಂದೇಶ ಬಿತ್ತುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.

ಹೊಸಕೋಟೆ: ಕನಕದಾಸರು ಸಮಾಜ ಸುಧಾರಕರು, ಸಮಾಜದಲ್ಲಿ ಸಮಾನತೆಯ ಸಂದೇಶ ಬಿತ್ತುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.

ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾಸ ಪರಂಪರೆಯಲ್ಲಿ ಕನಕದಾಸರು ಶ್ರೇಷ್ಠರು. ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು. ಜಾತಿ, ಮತ, ಕುಲ ಮೀರಿಸುವಂತೆ ಸಾಮಾಜಿಕ ಪಿಡುಗುಗಳನ್ನು ಖಂಡಿಸಿ ಸಾಮಾಜಿಕ ಕ್ರಾಂತಿಯನ್ನೆ ಹುಟ್ಟುಹಾಕಿದರು ಎಂದರು.

ಗ್ರಾಪಂ ಸದಸ್ಯ ಎಸ್‌ಟಿಬಿ ಮುನಿರಾಜು ಮಾತನಾಡಿ, ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ. ಸಮಾಜದಲ್ಲಿ ಸಮಾನತೆಯ ಸಂದೇಶಗಳನ್ನು ಹರಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕನಕದಾಸರ ಸಂದೇಶಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾಪಂ ವ್ಯಾಪ್ತಿಯ 10 ಗ್ರಾಮಗಳಲ್ಲಿ ಸಂಚರಿಸುವ ರಥದ ಮೆರವಣಿಗೆಗೆ ಗ್ರಾಪಂ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ರೂಪ, ಪಿಡಿಒ ಸುಬ್ರಮಣಿ, ಸದಸ್ಯರಾದ ಜಿನ್ನಾಗರ ಶ್ರೀನಿವಾಸ್, ಮೀನಾ, ಮುನೇಗೌಡ, ಗಣಗಲು ರಾಮಮೂರ್ತಿ, ಪೆತ್ತನಹಳ್ಳಿ ನಾಗವೇಣಿ, ಗುಟ್ಟಹಳ್ಳಿ ವೆಂಕಟರಮಣಸ್ವಾಮಿ, ರಮೇಶ್, ಗಿರಿಜಾ, ಗಗನ, ಗೌರೀಶ್, ಮಮತಾ, ಶೈಲ, ಮಂಜುನಾಥ್, ಆಂಜಿನಮ್ಮ, ನಂದಿನಿ, ಚಂದ್ರು, ಮುನಿವೆಂಕಟಮ್ಮ, ನಿರ್ಮಲ ಇತರರು ಹಾಜರಿದ್ದರು.

ಫೋಟೋ: 18 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.