ಕಾಲಭೈರವೇಶ್ವರಸ್ವಾಮಿ ಬಸಪ್ಪನ ವಿಗ್ರಹಕ್ಕೆ ಕನಕಾಭಿಷೇಕ

| Published : Nov 02 2024, 01:31 AM IST

ಕಾಲಭೈರವೇಶ್ವರಸ್ವಾಮಿ ಬಸಪ್ಪನ ವಿಗ್ರಹಕ್ಕೆ ಕನಕಾಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಅರಸಿಕೆರೆ ಗ್ರಾಮದಲ್ಲಿ ಶಿವೈಕ್ಯ ಬಸಪ್ಪನ ವಿಗ್ರಹಕ್ಕೆ ಈಗಿನ ಬಸಪ್ಪನ ಸಮ್ಮುಖದಲ್ಲಿ ತೀರ್ಥ, ರುದ್ರಾಭಿಷೇಕ, ಕನಾಕಾಭಿಷೇಕ ನಡೆಸಲಾಯಿತು. ತರುವಾಯ ಕಾಲಭೈರವೇಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಸವ ಶಿವೈಕ್ಯ ಬಸಪ್ಪನ ವಿಗ್ರಹ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಭಾರತೀನಗರ

ಚಿಕ್ಕ ಅರಸಿನಕೆರೆ ಶಿವೈಕ್ಯ ಕಾಲಭೈರವೇಶ್ವರಸ್ವಾಮಿ ಬಸಪ್ಪನ ವಿಗ್ರಹಕ್ಕೆ ಕಾರ್ತಿಕ ಅಮಾವಾಸ್ಯೆ ಭಾರತದ ವಿವಿಧ ತೀರ್ಥ ಕ್ಷೇತ್ರಗಳ ಬಳಿ ನದಿಗಳಿಂದ ತರಲಾದ ತೀರ್ಥ, ಕನಕಾಭಿಷೇಕ ಯಶಸ್ವಿಯಾಗಿ ನೆರವೇರಿತು.

ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ಈಗಿನ ಬಸಪ್ಪನಿಗೆ ಹೂವು, ಹೊಂಬಾಳೆ ಪೂಜೆ ನೆರವೇರಿಸಿ ವೀರಭದ್ರನ ಕುಣಿತ, ಪೂರ್ಣ ಕುಂಭಗಳು, ವಿವಿಧ ರೀತಿಯ ಚರ್ಮವಾದ್ಯಗಳ ಸಮೇತವಾಗಿ ಗ್ರಾಮದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ತರುವಾಯ ಕಾಲಭೈರವೇಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಸವ ಶಿವೈಕ್ಯ ಬಸಪ್ಪನ ವಿಗ್ರಹ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಆಗಮಿಸಿತು. ಬಸಪ್ಪನ ಸಮ್ಮುಖದಲ್ಲಿ ಮಂಜುನಾಥ ಶರ್ಮ, ನವೀನ್ ಕುಮಾಶರ್ಮ, ವೆಂಕಟಾದ್ರಿಶರ್ಮ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ಪಂಚಾಮೃತಾಂಭಿಷೇಕ, ತೀರ್ಥಾಭಿಷೇಕ, ರುದ್ರಾಭಿಷೇಕ,ಪುಷ್ಪಾಭಿಷೇಕ, ಅಂತಿಮವಾಗಿ ಕನಕಾಭಿಷೇಕ ನಡೆಸಲಾಯಿತು.

ಎಲ್ಲಾ ರೀತಿಯ ಪೂಜಾ ಕೈಂಕರ್ಯಗಳನ್ನು ಸಹಸ್ರಾರು ಭಕ್ತಾದಿಗಳು ಕಣ್ತುಂಬಿಕೊಂಡರು. ಪೂಜೆ ನಂತರ ಭಕ್ತರೂ ಕೂಡ ತಮ್ಮ ಬಳಿ ಇರುವ ಕನಕಗಳಿಂದಿ ಅಭಿಷೇಕ ಮಾಡಿದರು. ಅಮಾವಾಸ್ಯೆ ದಿನವಾದ್ದರಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕಾಲಭೈರವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಎಲ್ಲಾ ಭಕ್ತಾದಿಗಳಿಗೂ ಪ್ರಸಾದ, ಅನ್ನಸಂತರ್ಪಣೆ ನಡೆಯಿತು.

ಈ ವೇಳೆ ಟ್ರಸ್ಟ್‌ನ ಅಧ್ಯಕ್ಷ ಶಿವಲಿಂಗೇಗೌಡ, ದೊಡ್ಡಅರಸಿನಕೆರೆ ರಘು, ಏಳೂರಮ್ಮನ ಪೂಜಾರಿ ಕೊಂಡೇಗೌಡ, ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 124.80 ಅಡಿ

ಒಳ ಹರಿವು – 6,286 ಕ್ಯುಸೆಕ್

ಹೊರ ಹರಿವು – 6,028 ಕ್ಯುಸೆಕ್

ನೀರಿನ ಸಂಗ್ರಹ – 49.452 ಟಿಎಂಸಿ