ಸಾಮಾಜಿಕ ಅಸಮಾನತೆ ವಿರುದ್ಧ ಜಾಗೃತಿ ಮೂಡಿಸಿದ್ದ ಕನಕದಾಸರು

| Published : Nov 19 2024, 12:47 AM IST

ಸಾಮಾಜಿಕ ಅಸಮಾನತೆ ವಿರುದ್ಧ ಜಾಗೃತಿ ಮೂಡಿಸಿದ್ದ ಕನಕದಾಸರು
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಿ ಪಂಥದ ಚಳುವಳಿ ಮೇಲೆ ನಂಬಿಕೆ ಇಟ್ಟಿದ್ದ ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿದ್ದರು.

ಹರಪನಹಳ್ಳಿ; ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಅಸಮಾನತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜಿನ ಗಾಂಧಿ ಮೆಮೊರಿಯಲ್ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಆಯೋಜಿಸಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರು ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಕ್ತಿ ಪಂಥದ ಚಳುವಳಿ ಮೇಲೆ ನಂಬಿಕೆ ಇಟ್ಟಿದ್ದ ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿದ್ದರು. ಇವರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನು ಉಡುಪಿಯ ಮಠದಲ್ಲಿ ಗೋಡೆ ಸೀಳಿ ದರ್ಶನ ನೀಡಿದ್ದರು. ಅದು ಇಂದು ಕನಕ ಕಿಂಡಿಯಾಗಿ ಪ್ರಸಿದ್ಧಿ ಪಡೆದಿದೆ ಎಂದು ನುಡಿದರು.

ವೀರವನತೆ ಒನಕೆ ಓಬವ್ವ ಶೌರ್ಯ ಸಾಹಸದ ಮೂಲಕ ಶತ್ರು ಸೈನಿಕರನ್ನು ಸದೆಬಡಿದು ಚಿತ್ರದುರ್ಗದ ಎಳು ಸುತ್ತಿನಕೋಟೆಯನ್ನು ಕಾಪಾಡಿದ ವೀರ ಮಹಿಳೆ ಎಂದು ಸ್ಮರಿಸಿದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನಕದಾಸರು ಬಹುಮುಖ ಪ್ರತಿಭೆಯಾಗಿದ್ದರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ಸತೀಶ್ ಅವರು ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ ಕನಕದಾಸರು ವೈವಿಧ್ಯಮ ಸಾಹಿತ್ಯ ರಚಿಸುವ ಮೂಲಕ ನಾಡಿನ ಸಾಮಾನ್ಯ ಜನರಲ್ಲೂ ಸಂಗೀತದ ಅಭಿರುಚಿ ನೀಡಿದ್ದಾರೆ, ಇವರು ಕರ್ನಾಟಕ ಕೀರ್ತನಾ ಸಾಹಿತ್ಯದ ಅಸ್ಮಿತೆ ಎಂದು ಬಣ್ಣಿಸಿದರು.

ಉಪನ್ಯಾಸಕ ಅಜ್ಜಣ್ಣ ವೀರವನತೆ ಒನಕೆ ಓಬವ್ವ ಕುರಿತು ಉಪನ್ಯಾಸ ನೀಡಿ, ಶೌರ್ಯ, ರಾಜ್ಯ ನಿಷ್ಠೆ ಹೊಂದಿದ್ದ ಒನಕೆ ಓಬವ್ವ ತನ್ನ ಒಂದು ಒನಕೆ ಮೂಲಕ ಇಡೀ ಕೊಟೆಯನ್ನು ಕಾಪಾಡಿದರು. ಇಂತಹ ಮಹನೀಯರ ಜೀವನಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳೊಣ ಎಂದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಶಿಲ್ದಾರ ಬಿ.ವಿ. ಗಿರೀಶಬಾಬು, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಟಿ.ವೆಂಕಟೇಶ, ಅಬ್ದುಲ್ ರೆಹಮಾನ್, ಲಾಟಿ ದಾದಾಪೀರ, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಎಚ್.ವಸಂತಪ್ಪ, ಗುಡಿ ನಾಗರಾಜ, ಅಬ್ದುಲ್ ಅಲೀಂ, ತಾಪಂ ಇಒ ವೈ.ಎಚ್. ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪ, ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಪ್ರತಾಪ್, ಮುಖಂಡರಾದ ವೈ.ಕೆ.ಬಿ. ದುರುಗಪ್ಪ, ಕಲ್ಲೇರ ಬಸವರಾಜಪ್ಪ, ಗುಂಡಗತ್ತಿ ಕೊಟ್ರಪ್ಪ, ಮುತ್ತಿಗಿ ಜಂಬಣ್ಣ, ಸಾಹಿತಿ ಇಸ್ಮಾಯಿಲ್ ಎಲಿಗಾರ, ಹುಲಿಕಟ್ಟಿ ಚಂದ್ರಪ್ಪ, ಚಿಕ್ಕೇರಿ ಬಸಪ್ಪ, ಅಲಮರಸೀಕೆರೆ ಪರಶುರಾಮ, ಕೋಟೇಪ್ಪ, ಬಳಿಗನೂರು ಪರಶುರಾಮ, ಸೈಯದ್ ಇರ್ಫಾನ್, ಕೃಷಿ ಅಧಿಕಾರಿ ಉಮ್ಮೇಶ, ಬಿಸಿಎಂ ಇಲಾಖೆಯ ಕೆ.ಭೀಮಪ್ಪ, ಗಿರಜ್ಜಿ ಮಂಜುನಾಥ, ಬಿಆರ್‌ಪಿ ಚೆನ್ನಪ್ಪ ಇಟ್ಟಿಗುಡಿ ರಮೇಶ, ದಾದಪುರ ಶಿವಪುತ್ರ, ಹಂಪಾಪುರ ಬೀರಪ್ಪ, ಕಂಚಿಕೇರಿ ಕೆಂಚಪ್ಪ, ಅರಸೀಕೆರೆ ಮಂಜುನಾಥ್, ಹಲುವಾಗಲು ಸುನೀಲ್ ಸೇರಿದಂತೆ ಇತರರು ಇದ್ದರು.