ಸಾರಾಂಶ
ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಜ್ಞಾನದ ಮಾರ್ಗ ತೋರಿಸಿದ ಮಹಾಯೋಗಿ. ಅವರ ಜಯಂತಿಯನ್ನು ಭಕ್ತಿಪೂರ್ವಕ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.
ಹುಬ್ಬಳ್ಳಿ:
ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ಪ್ರಸ್ತುತ ಸಮಾಜಕ್ಕೆ ಇಂತಹ ಮಹಾತ್ಮರ ಸಂದೇಶಗಳು ದಾರಿ ದೀಪವಾಗಲಿವೆ ಎಂದು ಪ್ರಾಚಾರ್ಯ ಸಂದೀಪ ಬೂದಿಹಾಳ ಹೇಳಿದರು.ನಗರದ ಕನಕದಾಸ ಶಿಕ್ಷಣ ಸಂಸ್ಥೆಯ ಡಾ. ಬಿ.ಎಫ್. ದಂಡಿನ ಸಭಾಂಗಣದಲ್ಲಿ ಸಮೂಹ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ 537ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಜ್ಞಾನದ ಮಾರ್ಗ ತೋರಿಸಿದ ಮಹಾಯೋಗಿ. ಅವರ ಜಯಂತಿಯನ್ನು ಭಕ್ತಿಪೂರ್ವಕ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆಯು ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.ಉಪನ್ಯಾಸಕಿ ಡಾ. ಜ್ಯೋತಿ ಹಿರೇಮಠ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬೀರೇಶ ತಿರಕಪ್ಪನವರ ಮಾತನಾಡಿದರು. ಬಿ.ಇಡಿ ಪ್ರಾಚಾರ್ಯೆ ಡಾ. ಶೇಖ್, ಮಹೇಶಗೌಡ ಗೌಡಪ್ಪಗೌಡ್ರ, ಕೆಎಸ್‌ಎಸ್ ಮಹಾವಿದ್ಯಾಲಯದ ಅಧೀಕ್ಷಕ ಎಸ್.ಎನ್. ಉಳ್ಳಾಗಡ್ಡಿ, ಡಾ. ಎ.ಎಸ್. ಗಡಾದ, ಪ್ರೊ. ಗಾಯತ್ರಿ ಹೊಸಮನಿ, ಡಾ. ಸವಿತಾ ಸಿದ್ದೂನವರ, ಡಾ. ಮಂಜುನಾಥ ಚಳಗೇರಿ ಸೇರಿದಂತೆ ಎಲ್ಲ ಮಹಾವಿದ್ಯಾಲಯಗಳ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.