ಕನಕದಾಸರು ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದ ಏಕೈಕ ಕೀರ್ತನಕಾರರಾಗಿದ್ದು ತಮ್ಮ ಕೀರ್ತನೆಗಳ ಮೂಲಕ ಏಕಾಂಗಿಯಾಗಿ ಸಮಾನತೆಯನ್ನು ಪ್ರತಿಪಾದಿಸಿದರು. ಆ ನಂತರದಲ್ಲಿ ಇಂತಹ ಮಾದರಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವುದು ಕುವೆ೦ಪು ಅವರಿಂದ ಎಂದರು. ಕನಕದಾಸರು ಕೀರ್ತನಕಾರರು ಮಾತ್ರವಲ್ಲ ಕವಿಗಳು ಆಗಿದ್ದರು ಮೋಹನ ತರಂಗಿಣಿ, ಹರಿಭಕ್ತಿಸಾರ, ನಳಚರಿತೆ, ರಾಮಧಾನ್ಯಚರಿತೆ ಎಂಬ ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದು ತಮ್ಮ ಮೋಹನ ತರಂಗಿಣಿ ಕೃತಿಯ ಮೂಲಕ ಶೈವ ಮತ್ತು ವೈಷ್ಣವ ಪರಂಪರೆಗಳನ್ನು ಪರಸ್ಪರ ಸಮನ್ವಯ ಗೊಳಿಸುವ ಪರಂಪರೆಗೆ ನಾಂದಿ ಹಾಡಿದ್ದಾರೆ ಎ೦ದರು.
ಹಾಸನ: ಹಾಸನ ವಿಶ್ವವಿದ್ಯಾಲಯದ ಹೇಮಗಂಗೋತ್ರಿ ಅವರಣದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಂ. ಶಂಕರ ಅವರು ಮಾತನಾಡಿ ಕನಕದಾಸರಿಗೂ ಹಾಸನ ಜಿಲ್ಲೆಗೂ ವಿಶಿಷ್ಟವಾದ ಸಂಬಂಧವಿತ್ತು. ಅನೇಕ ಬಾರಿ ಹಾಸನದ ಬೇಲೂರಿಗೆ ಬೇಟಿ ನೀಡಿದ್ದಾರೆ. ಆ ಸಂಧರ್ಭದಲ್ಲಿ ರಚಿಸಿದ ಕೀರ್ತನೆಗಳಿಗೆ ವೇಲಾಪುರಿ (ಬೇಲೂರು) ಚೆನ್ನಕೇಶವ ಎಂಬ ಅಂಕಿತವನ್ನು ಬಳಸಿದ್ದಾರೆ. ದಾಸಪರಂಪರೆ ಕಾಣಿಸಿಕೊಳ್ಳವ ಬೇರೆಲ್ಲ ಕೀರ್ತನಕಾರರಿಗಿಂತ ಕನಕದಾಸರು ಅಸಮಾನತೆ ವಿರುದ್ದ ಧ್ವನಿ ಎತ್ತಿದ ಕಾರಣಕ್ಕಾಗಿ ಪ್ರಶ್ನೆ ಮಾಡಿದ್ದಕ್ಕಾಗಿ ಅತ್ಯಂತ ಪ್ರಸ್ತುತರು ಎನಿಸುತಾರೆ. 12ನೇ ಶತಮಾನದ ವಚನ ಚಳುವಳಿಯಲ್ಲಿ ಸಮಾನತೆಗಾಗಿ ಹಿಂದುಳಿದವರು, ದಲಿತರು ಎಲ್ಲರೂ ಒಟ್ಟಾಗಿ ಭಾಗಿಯಾದರು ಆದರೆ ಆ ನಂತರ 16ನೇ ಶತಮಾನದ ಕೀರ್ತನ ಪರಂಪರೆಯಲ್ಲಿ ಕನಕದಾಸರು ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದ ಏಕೈಕ ಕೀರ್ತನಕಾರರಾಗಿದ್ದು ತಮ್ಮ ಕೀರ್ತನೆಗಳ ಮೂಲಕ ಏಕಾಂಗಿಯಾಗಿ ಸಮಾನತೆಯನ್ನು ಪ್ರತಿಪಾದಿಸಿದರು. ಆ ನಂತರದಲ್ಲಿ ಇಂತಹ ಮಾದರಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವುದು ಕುವೆ೦ಪು ಅವರಿಂದ ಎಂದರು. ಕನಕದಾಸರು ಕೀರ್ತನಕಾರರು ಮಾತ್ರವಲ್ಲ ಕವಿಗಳು ಆಗಿದ್ದರು ಮೋಹನ ತರಂಗಿಣಿ, ಹರಿಭಕ್ತಿಸಾರ, ನಳಚರಿತೆ, ರಾಮಧಾನ್ಯಚರಿತೆ ಎಂಬ ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದು ತಮ್ಮ ಮೋಹನ ತರಂಗಿಣಿ ಕೃತಿಯ ಮೂಲಕ ಶೈವ ಮತ್ತು ವೈಷ್ಣವ ಪರಂಪರೆಗಳನ್ನು ಪರಸ್ಪರ ಸಮನ್ವಯ ಗೊಳಿಸುವ ಪರಂಪರೆಗೆ ನಾಂದಿ ಹಾಡಿದ್ದಾರೆ ಎ೦ದರು.ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳಾದ ಪ್ರೊ. ಟಿ. ಸಿ. ತಾರಾನಾಥ್ ಅವರು ಮಾತನಾಡಿ ಪ್ರಕೃತಿ ಎಂದಿಗೂ ಯಾರಿಗೂ ಭೇದಭಾವ ಮಾಡಿಲ್ಲ ಅಸಮಾನತೆಯನ್ನು ಸೃಷ್ಟಿಸಿದ್ದೆ ಮನುಷ್ಯ ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಹೋರಾಡಿದ ಕನಕದಾಸರಂತಹ ದಾರ್ಶನಿಕರ ಜಯಂತಿಯನ್ನು ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಇಂತಹ ಮಹನೀಯರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರ ಸಮಗ್ರ ವ್ಯಕ್ತಿತ್ವ ನಿರ್ಮಾಣ ಮಾಡಲು ಶಿಕ್ಷಕವರ್ಗ ಶ್ರಮಿಸಬೇಕು ಎಂದು ಸಲಹೆ ನೀಡಿ ಕಾರ್ಯಕ್ರಮದ ಶುಭ ಕೋರಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪರಿಕ್ಷಾಂಗ ಕುಲಸಚಿವರಾದ ಪ್ರೊ ನಾಗರಾಜ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಪ್ರೊ. ಹಾಲಪ್ಪ ಆರ್ ಗಾಜೇರ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಡಾ.ಪುಟ್ಟರಾಜಪ್ಪ ಕಾರ್ಯಕ್ರಮವನ್ನು ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಅಧ್ಯಾಪಕರು, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.