ಸಾರಾಂಶ
ಅಂತರಂಗ ಶುದ್ಧ ಜೀವನದ ಮಾರ್ಗಗಳನ್ನು ಸಮಾಜಕ್ಕೆ ಸಾಹಿತ್ಯದ ಮೂಲಕ ಬಿತ್ತಿ, ಅದರಂತೆ ನಡೆದು ಸರಳ ಜೀವನ ಸೂತ್ರಗಳನ್ನು ಹೇಳಿದ ಸಂತ ಕವಿ ಕನಕದಾಸರು ನಾಡು ಕಂಡ ಅದ್ವಿತೀಯ ಪುಣ್ಯಪುರುಷರು ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.
ಹಾನಗಲ್ಲ:ಅಂತರಂಗ ಶುದ್ಧ ಜೀವನದ ಮಾರ್ಗಗಳನ್ನು ಸಮಾಜಕ್ಕೆ ಸಾಹಿತ್ಯದ ಮೂಲಕ ಬಿತ್ತಿ, ಅದರಂತೆ ನಡೆದು ಸರಳ ಜೀವನ ಸೂತ್ರಗಳನ್ನು ಹೇಳಿದ ಸಂತ ಕವಿ ಕನಕದಾಸರು ನಾಡು ಕಂಡ ಅದ್ವಿತೀಯ ಪುಣ್ಯಪುರುಷರು ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.
ಸೋಮವಾರ ಹಾನಗಲ್ಲಿನ ಮಾಹಾತ್ಮಾ ಗಾಂಧಿ ವೃತ್ತದ ಬಳಿಯ ಕನಕ ವೃತ್ತದಲ್ಲಿ ಸಂತ ಕವಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಂಘರ್ಷಗಳ ಸಮಾಜದಲ್ಲಿ ಶಾಂತಿಯ ಸೂತ್ರಗಳನ್ನು ಹೇಳಿದ ಕನಕದಾಸರು ಮೌಲ್ಯದ ಬದುಕಿನ ವಾಸ್ತವ ಸತ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಹೇಳಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವ ಅವರ ಕೀರ್ತನೆಗಳು ೧೬ನೇ ಶತಮಾನದ ಸಾಹಿತ್ಯ ಕೃಷಿಗೆ ಶಕ್ತಿ ತುಂಬಿವೆ. ಸ್ವಾರ್ಥ ರಹಿತ ಜೀವನ ವಿಧಾನವನ್ನು ತಮ್ಮ ಸಾಹಿತ್ಯದಲ್ಲಿ ಬಿತ್ತರಿಸಿದ ಕನಕದಾಸರಿಗೆ ಜಾತ್ಯತೀತ ಸಮಾಜದ ಕನಸು ನನಸಾಗಿಸುವ ಉದ್ದೇಶವಿತ್ತು. ಕುಲದ ನೆಲೆ, ಜಾತಿ ಸಂಘರ್ಷಕ್ಕೆ ತೆರೆ ಹಾಡಬೇಕೆಂದ ಅವರ ನಿಲುವು ಎಲ್ಲ ಕಾಲಕ್ಕೂ ಸಲ್ಲುವ ಚಿಂತನೆಯಾಗಿದೆ. ಕನಕದಾಸರನ್ನು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ ನೋಡಿದರೆ ಅವರೊಂದು ಅದ್ಭುತ ಆದರ್ಶದ ಶಕ್ತಿಯಾಗುತ್ತಾರೆ ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುರೇಶ ದೊಡ್ಡ ಕುರುಬರ, ವಿನಾಯಕ ಕುರುಬರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಪುರಸಭೆ ಮುಖ್ಯಾಧಿಕಾರಿ ವಾಯ.ಕೆ. ಜಗದೀಶ, ಸಾಹಿತಿ ಮಾರುತಿ ಶಿಡ್ಲಾಪುರ, ಮಹೇಶ ಪವಾಡಿ, ನಿಂಗಪ್ಪ ಗಾಜಿ, ಪ್ರಕಾಶ ಜಂಗಳಿ, ಕಲ್ಯಾಣಕುಮಾರ ಶೆಟ್ಟರ, ವಿಜಯಕುಮಾರ ದೊಡ್ಡಮನಿ, ಅಶೋಕ ಆರೇಗೊಪ್ಪ, ಪ್ರಶಾಂತ ಗೊಂದಿ, ದಾನಪ್ಪ ಗಂಟೇರ, ಮಾಲತೇಶ ಬ್ಯಾಗವಾದಿ, ಎಸ್.ಆರ್.ಮಾನೆ, ಸದಾಶಿವ ಗುಬ್ಬೇರ, ದರ, ಮತೀನ ಶಿರಬಡಗಿ, ಸಾಯಿನಾಥ ಮಂತ್ರೋಡಿ, ಶಂಭು ಮಲ್ಲಿಗಾರ, ಪರಶುರಾಮ ಖಂಡೂನವರ, ಶಿವು ಭದ್ರಾವತಿ, ಶಿವು ತಳವಾರ, ಮಂಜುನಾಥ ಗುರಣ್ಣನವರ ಮೊದಲಾದವರು ಈ ಸಂದರ್ಭದಲ್ಲಿದ್ದರು.