ಸಾರಾಂಶ
ಕನಕದಾಸರು ಸಮಾಜ ಸುಧಾರಕರಾಗಿ ತಮ್ಮ ಕೀರ್ತನೆಗಳ ಮುಖಾಂತರ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಪಾಟೀಲ ಹೇಳಿದರು.
ಕುಂದಗೋಳ: ಭಕ್ತ ಶ್ರೇಷ್ಠ ಹಾಗೂ ಸಮಾಜ ಸುಧಾರಕರಾದ ಕನಕದಾಸರ ಕೊಡುಗೆ ಅನನ್ಯವಾಗಿದ್ದು, ಅವರ ಕೀರ್ತನೆಗಳು ಮತ್ತು ವಚನ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಎಂ.ಆರ್. ಪಾಟೀಲ್ ತಿಳಿಸಿದರು.
ತಾಲೂಕಾಡಳಿತ ಸೌಧದ ಸಭಾಭವನದಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನಕದಾಸರು ಸಮಾಜ ಸುಧಾರಕರಾಗಿ ತಮ್ಮ ಕೀರ್ತನೆಗಳ ಮುಖಾಂತರ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು 316ಕ್ಕೂ ಹೆಚ್ಚು ಕೀರ್ತನೆಗಳನ್ನು ನಾಡಿಗೆ ನೀಡಿದ್ದು, ಇದು ಸಾಹಿತ್ಯ ಸಂಪತ್ತು ಎಂದರು.
ಕನಕದಾಸರು ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಅವರ ಭಕ್ತಿಗೆ ಕೃಷ್ಣನೇ ದರ್ಶನ ನೀಡಿದ ಪವಾಡವನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದರು.ಕನಕದಾಸರ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಆಚರಣೆಗೆ ತಂದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಷಣ್ಮುಖ ಶಿವಳ್ಳಿ ಮಾತನಾಡಿ, ಜಾತಿಯತೆ ಮರೆತು ಎಲ್ಲರೂ ಒಂದೇ ಎಂಬ ಭಾವನೆ ಹೊಂದಬೇಕು. ಕನಕದಾಸರು ಹೆಚ್ಚು ಕೀರ್ತನೆಗಳನ್ನು ಸಾಹಿತ್ಯ ರೂಪದಲ್ಲಿ ನೀಡಿದ ಮಹಾನ್ ದಾರ್ಶನಿಕರು,” ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ್ ಕಮ್ಮಾರ, ಸಿಪಿಐ ಸಮೀರ ಮುಲ್ಲಾ, ಮುಖಂಡರಾದ ಮಾಲತೇಶ ಶ್ಯಾಗೋಟಿ, ಬಸವರಾಜ ಗೊರವರ, ಲಕ್ಷ್ಮಣ ಚುಳಕಿ, ಎಸ್.ಎನ್. ಅರಳಿಕಟ್ಟಿ, ಚಂದ್ರು ಕುರುಬರ, ಕಲ್ಲಪ್ಪ ಹರಕುಣಿ, ಚಾಯಪ್ಪ ಹೊಸಮನಿ, ನಂಜಪ್ಪ ನಲವಡಿ, ಹಾಗೂ ಕುರುಬ ಸಮಾಜದ ಗುರು ಹಿರಿಯರು ಮತ್ತು ಮುಖಂಡರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))