ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ: ತಹಶೀಲ್ದಾರ್ ನರಸಪ್ಪ

| Published : Nov 09 2025, 03:15 AM IST

ಸಾರಾಂಶ

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು.

ಕುರುಗೋಡು: ಇಲ್ಲಿನ ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಶನಿವಾರ ತಹಶೀಲ್ದಾರ್ ನರಸಪ್ಪ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ. ಕನಕದಾಸರನ್ನು ನಾವು ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಅವರ ಜೀವನ ಬೋಧನೆ, ಕೀರ್ತನೆ, ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಫೂರ್ತಿಯಾಗಿದೆ. ಅವರು ಕರ್ನಾಟಕದಲ್ಲಿ ಭಕ್ತಿ ಚಳವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ತತ್ವ, ಸಿದ್ಧಾಂತ ಅವರ ತತ್ವ ಮತ್ತು ಆದರ್ಶ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ವಿವಿಧೆಡೆ ಸಂಭ್ರಮ ಸಡಗರದಿಂದ ಕನಕದಾಸ ಜಯಂತಿ ಆಚರಿಸಲಾಯಿತು.

ಬಾದನಹಟ್ಟಿ, ಸೋಮಸಮುದ್ರ, ಕಲ್ಲುಕಂಬ, ವದ್ದಟ್ಟಿ, ಮದಿರೆ, ಸೋಮಲಾಪುರ, ಗೆಣಿಕೆಹಾಳ್ ಸೇರಿ ಇತರಡೆ ಡೊಳ್ಳು ಸೇರಿ ವಿವಿಧ ವಾದ್ಯದೊಂದಿಗೆ ತೆರೆದ ವಾಹನದಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಈ ವೇಳೆ ಅನ್ನದಾಸೋಹ, ತಂಪು ಪಾನೀಯ ವಿತರಿಸಲಾಯಿತು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಚೇರಿ ಶಿರಸ್ತೇದಾರ್ ರಾಜಶೇಖರ್, ಸಿಬ್ಬಂದಿ ಯು.ಲತಾ, ಚಂದ್ರಮ್ಮ, ಮಲ್ಲಮ್ಮ, ಮಲ್ಲಮ್ಮ, ಸುಮಾ, ಶ್ವೇತಾ ಮತ್ತು ಸರಸ್ವತಿ ಇದ್ದರು.

ಕುರುಗೋಡು ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಶನಿವಾರ ಕನಕದಾಸರ ಜಯಂತಿ ಆಚರಿಸಲಾಯಿತು.