ಕನಕದುರ್ಗಮ್ಮ ಗುಡಿ ಅಂಡರ್''''ಪಾಸ್ ಅಭಿವೃದ್ಧಿ ಕಾಮಗಾರಿ: ಶಾಸಕ ನಾರಾ ಭರತ್ ರೆಡ್ಡಿ ಪರಿಶೀಲನೆ

| Published : Dec 24 2024, 12:46 AM IST

ಕನಕದುರ್ಗಮ್ಮ ಗುಡಿ ಅಂಡರ್''''ಪಾಸ್ ಅಭಿವೃದ್ಧಿ ಕಾಮಗಾರಿ: ಶಾಸಕ ನಾರಾ ಭರತ್ ರೆಡ್ಡಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಅನಿವಾರ್ಯವಾಗಿ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ.

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್''''ಡಿಬಿ)ಯ 2023-24ರ ಮುಖ್ಯ ಮಂತ್ರಿಗಳ ವಿವೇಚನಾ ನಿಧಿಯ ಅನುದಾನದ ಅಡಿ ಕಳೆದ ತಿಂಗಳು ನ.24ರಂದು ಆರಂಭಗೊಂಡಿದ್ದ ಕನಕದುರ್ಗಮ್ಮ ದೇವಸ್ಥಾನ ಸಮೀಪದ ಅಂಡರ್ ಪಾಸ್ ಕಾಮಗಾರಿಯ ಸ್ಥಳಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆಗೆ ಕಾಂಕ್ರಿಟ್ ಹಾಕುವ ಕೆಲಸ ಭರದಿಂದ ಸಾಗಿರುವುದನ್ನು ಸ್ವತಃ ವೀಕ್ಷಿಸಿ ಸಲಹೆ ನೀಡಿದರು.ಶುಕ್ರವಾರ ಮಧ್ಯಾಹ್ನ ನಗರ ಸಂಚಾರ ನಡೆಸಿದ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಗುತ್ತಿಗೆದಾರ ಶ್ರೀಧರ್ ಮಾಹಿತಿ ನೀಡಿದರು. ಶಾಸಕ ನಾರಾ ಭರತ್ ರೆಡ್ಡಿ ಅಗತ್ಯ ಸೂಚನೆ ನೀಡಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಿಳಿಸಿದರು.

ನಗರದಲ್ಲಿ ಹಲವು ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಸಾರ್ವಜನಿಕರು ಅನಿವಾರ್ಯವಾಗಿ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ. ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಈ ಮೂಲಕ ಮನವಿ ಮಾಡಿದ್ದಾರೆ.

ಭೇಟಿ ವೇಳೆ ಬಳ್ಳಾರಿ ಮಹಾನಗರ ಪಾಲಿಕೆಯ ಪಾಲಿಕೆಯ ಎಂಜಿನಿಯರ್''''ಗಳು, ಗುತ್ತಿಗೆದಾರರು ಇದ್ದರು.

ಆಪ್ತ ಸಹಾಯಕ ರತ್ನಬಾಬು, ಮೋಕ ನಾಗರಾಜ, ನಾರಾಯಣ ರೆಡ್ಡಿ, ಮಂಜುನಾಥ, ಚಿನ್ನ, ಚರಣರಾಜ್, ಸೀನಾ, ಧರ್ಮಶ್ರೀ ಹಾಗೂ ರಘು ಸೇರಿದಂತೆ ಹಲವರು ಇದ್ದರು.