ಕ್ರೀಡಾಕೂಟದಲ್ಲಿ ಮಿಂಚಿದ ಕನಕಗಿರಿ ನೌಕರರು

| Published : Mar 11 2024, 01:17 AM IST

ಸಾರಾಂಶ

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ನೌಕರರು ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನಕಗಿರಿ: ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ನೌಕರರು ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕಳೆದ ವರ್ಷ ಕ್ರಿಕೆಟ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾದಂತೆ ಈ ವರ್ಷವೂ ಆಯ್ಕೆಯಾಗಿದೆ. ಶಿಕ್ಷಕ ರಾಘವೇಂದ್ರ ನಾಯ್ಕ್ ಜಾವೆಲಿನ್ ಥ್ರೋ ಪ್ರಥಮ, ಶಿಕ್ಷಕ ಪ್ರಕಾಶ ಕಮತರ ಗುಂಡು ಎಸೆತ ಪ್ರಥಮ, ೪*೧೦೦ ರಿಲೆಯಲ್ಲಿ ಪಾಂಡುರಂಗ ತಂಡ ಪ್ರಥಮ, ಶಿಕ್ಷಕ ಚನ್ನಬಸವ ಲಂಬಾಣಿ ೬೪ ಕೆಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ, ಚಿಕ್ಕಮಾದಿನಾಳ ಶಾಲಾ ಶಿಕ್ಷಕ ಮಂಜುನಾಥ ಮಾಗಳದ ದ್ವಿತೀಯ ಸ್ಥಾನ ಹಾಗೂ ಜನಪದ ಗೀತೆಯಲ್ಲಿ ಶಿಕ್ಷಕ ವೆಂಕೋಬ ಪೂಜಾರ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಎಡಿಸಿ ಸಾವಿತ್ರಿ ಬಿ. ಕಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಸೇರಿದಂತೆ ಹಲವು ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ, ಗೌರವಿಸಿದರು.ಇಬ್ಬರಿಗೆ ವೀರಾಗ್ರಣಿ ಪ್ರಶಸ್ತಿ : ಈ ಬಾರಿ ಇಬ್ಬರು ಶಿಕ್ಷಕರು ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಗುಡದೂರು ಶಾಲೆಯ ಶಿಕ್ಷಕ ಯಮನೂರಪ್ಪ ಕರಡೋಣ ೧೦೦ ಮೀ, ೨೦೦ ಮೀ ಹಾಗೂ ೧೫೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಮುಡಿಗೇರಿಸಿಕೊಂಡಿದ್ದರೆ, ಚಿರ್ಚನಗುಡ್ಡ ಶಾಲಾ ಶಿಕ್ಷಕಿ ಅಂಬಿಕಾಬಾಯಿ ೧೦೦ ಮೀ, ೨೦೦ ಮೀ ಹಾಗೂ ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ೨ನೇ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.