ಸಾರಾಂಶ
ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಕನಕಗಿರಿ ಪಟ್ಟಣದ 5ನೇ ವಾರ್ಡಿನ ನಿವಾಸಿಯೊಬ್ಬರು ಪಪಂ ಮುಂದೆ ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಕನಕಗಿರಿ: ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಟ್ಟಣದ 5ನೇ ವಾರ್ಡಿನ ನಿವಾಸಿಯೊಬ್ಬರು ಪಪಂ ಮುಂದೆ ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
5ನೇ ವಾರ್ಡಿನ ನಿವಾಸಿ ರವಿ ಶೆಟ್ಟರ್ ಮಾತನಾಡಿ, ನಮ್ಮ ಓಣಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ನಲ್ಲಿಯಲ್ಲಿ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಪಪಂ ಅಧಿಕಾರಿಗಳು, ಸಿಬ್ಬಂದಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ. ಅನಿವಾರ್ಯವಾಗಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದೇನೆ ಎಂದು ತಿಳಿಸಿದರು.ಎರಡನೇ ಶನಿವಾರ ಸರ್ಕಾರಿ ಕಚೇರಿ ರಜೆ ಹಿನ್ನೆಲೆ ಕಚೇರಿಯಲ್ಲಿ ಸಿಬ್ಬಂದಿ ಇರಲಿಲ್ಲ. ಪ್ರತಿಭಟನೆ ಸುದ್ದಿ ತಿಳಿದ ಪಪಂ ಸಿಬ್ಬಂದಿ ಕಚೇರಿಗೆ ಆಗಮಿಸಿ ಪ್ರತಭಟನಾ ನಿರತ ವ್ಯಕ್ತಿಯನ್ನು ಸಮಾಧಾನಪಡಿಸಿದರು.
4 ಮತ್ತು 5ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆ. ಬೋರ್‌ವೆಲ್‌ಗಳಲ್ಲಿ ನೀರು ಕುಸಿತವಾಗಿದೆ. ಇದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನೀಗಿಸಲಾಗುವುದು ಎಂದು ಪಪಂ ಸಿಬ್ಬಂದಿ ವಿಜಯಕುಮಾರ ಗಡಾದ ಭರವಸೆ ನೀಡಿದರು. ಬಳಿಕ ರವಿ ಶೆಟ್ಟರ್ ಅರೆಬೆತ್ತಲೆ ಪ್ರತಿಭಟನೆ ವಾಪಸ್ ಪಡೆದರು.