ಸಾರಾಂಶ
ಕನಕಪುರ: ತಾಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಆನಮಾನಹಳ್ಳಿಯಲ್ಲಿ ಗೊನೆಬಿಟ್ಟಿದ್ದ ಏಲಕ್ಕಿ ಬಾಳೆ ಮುರಿದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಕನಕಪುರ: ತಾಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಆನಮಾನಹಳ್ಳಿಯಲ್ಲಿ ಗೊನೆಬಿಟ್ಟಿದ್ದ ಏಲಕ್ಕಿ ಬಾಳೆ ಮುರಿದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಆನಮಾನಹಳ್ಳಿಯ ರೈತ ನಾಗಲಿಂಗೇಗೌಡ ಒಂದೂವರೆ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಬಾಳೆ ಮೋತೆ ಒಡೆದು ಗೊನೆಯಾಗುತ್ತಿದ್ದ ಸಮಯದಲ್ಲೇ ಬಿರುಗಾಳಿ ಸಹಿತ ಮಳೆಗೆ ತೋಟದಲ್ಲಿದ್ದ ಬಹುತೇಕ ಗಿಡಗಳು ನಾಶವಾಗಿವೆ. ಇದರಿಂದ 10 ಲಕ್ಷಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ.ಇದೇ ಗ್ರಾಮದ ರೈತ ರಾಜು ಅವರು ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 3 ಸಾವಿರ ಬಾಳೆಗಿಡಗಳಲ್ಲಿ ಬಹುತೇಕ ಗಿಡಗಳು ಬಿರುಗಾಳಿಗೆ ಸಿಲುಕಿ ಮುರಿದಿವೆ. ಇದರಿಂದ 20 ಲಕ್ಷದಷ್ಟು ನಷ್ಟವಾಗಿದೆ. ಇದೇ ಗ್ರಾಮದ ರಮೇಶ್ ಬೆಳೆದಿದ್ದ ಗೊನೆಬಿಟ್ಟಿದ್ದ ಬಾಳೆ ತೋಟ ನಾಶವಾಗಿದ್ದು ಸುಮಾರು 2 ಲಕ್ಷ ರು. ನಷ್ಟವಾಗಿದೆ. ತೋಟಗಾರಿಕೆ ಅಧಿಕಾರಿ ಶನಿವಾರ ನಾಶವಾಗಿರುವ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತ ರೈತರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ನೀರಿನ ಸಮಸ್ಯೆ:ಹಲವು ಕಡೆ ಬಾಳೆ ನಾಶ:
ಶುಕ್ರವಾರ ಬೀಸಿದ ಬಿರುಗಾಳಿಗೆ ತಾಲೂಕಿನ ಹಲವು ಕಡೆ ಬಾಳೆತೋಟಗಳು ನಾಶವಾಗಿವೆ. ಕಸಬಾ ಹೋಬಳಿ ವಿರುಪಸಂದ್ರ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಅವರ ಬಾಳೆತೋಟ ನಾಶವಾಗಿ ಸುಮಾರು 5 ಲಕ್ಷ ರು. ನಾಶವಾಗಿದೆ. ಸಾತನೂರು ಹೋಬಳಿ ಹೊಂಗಾಣಿದೊಡ್ಡಿ ಗ್ರಾಮದ ಮುನಿಸಿದ್ದೇಗೌಡರ ಬಾಳೆ ತೋಟ ನಾಶವಾಗಿದ್ದು 4 ಲಕ್ಷ ರು. ನಷ್ವವಾಗಿದೆ. ಬಿರುಗಾಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ತೋಟ ನಾಶವಾಗಿವೆ.4ಕೆಆರ್ ಎಂಎನ್ 13,14.ಜೆಪಿಜಿಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನಾಶವಾಗಿರುವುದು.