ಸಾರಾಂಶ
ಕಣಕಟ್ಟೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದ ನಡುವೆ ವೈಭವದಿಂದ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು, ಗ್ರಾಮದ ಪ್ರಮುಖ ಬೀದಿಗಳು ಮತ್ತು ದೇವಾಲಯ ಆವರಣವನ್ನು ತಳಿರು, ತೋರಣ, ಬಾಳೇಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಕಣಕಟ್ಟೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದ ನಡುವೆ ವೈಭವದಿಂದ ನೆರವೇರಿತು.ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು, ಗ್ರಾಮದ ಪ್ರಮುಖ ಬೀದಿಗಳು ಮತ್ತು ದೇವಾಲಯ ಆವರಣವನ್ನು ತಳಿರು, ತೋರಣ, ಬಾಳೇಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತು.
ರಥೋತ್ಸವದ ಅಂಗವಾಗಿ ಭಕ್ತಾಧಿಗಳು ವಿವಿಧ ಉತ್ಸವಗಳು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇವಿಯವರಿಗೆ ಭಕ್ತಿ ಸಮರ್ಪಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಕಳೆದ ಒಂದು ವಾರದ ಕಾಲ ಪೂಜಾ ಕೈಂಕರ್ಯ ನಡೆದು ಶ್ರೀ ವೀರಭದ್ರೇಶ್ವರ ದೇವಾಲಯದ ಬೀದಿಯಲ್ಲಿ ಗೋಧೋಳಿ ಲಗ್ನದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಪುನೀತರಾದರು.ಇತಿಹಾಸ ಪ್ರಸಿದ್ಧ ಕಣಕಟ್ಟೆಶ್ರೀ ಮೂರು ಕಣ್ಣು ಮಾರಮ್ಮ ದೇವಿಯ ನೇತ್ರತ್ವದಲ್ಲಿ ನಡೆದ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿ ಬೆಳಗ್ಗಿನಿಂದಲೇ ರಥೋತ್ಸವದ ಅಂಗವಾಗಿ ಮೆರವಣಿಗೆ, ಉತ್ಸವಾದಿಗಳು ನೆರವೇರಿದರೆ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿಸಿದ ನಂತರ ರಥ ಬೀದಿಯಲ್ಲಿ ಮೊದಲೇ ಬಣ್ಣ ಬಣ್ಣದ ಬಟ್ಟೆ, ಬಾವುಟಗಳು ಹಾಗೂ ದೊಡ್ಡ ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಶ್ರೀ ಕರಿಯಮ್ಮ ದೇವಿಯನ್ನು ಕೂರಿಸಲಾಯಿತು. ರಥದ ಗಾಲಿಗಳಿಗೆ ಕಾಯಿ, ಮಂಗಳಾರತಿ ಸಲ್ಲಿಸುತ್ತಿದ್ದಂತೆ ನೆರದಿದ್ದ ಭಕ್ತರು ಜಯಘೋಷ ಹಾಕುತ್ತಾ ತೇರು ಎಳೆದರು.
ಗ್ರಾಮದ ಎಲ್ಲಾ ದೇವಾಲಯಗಳಿಗೋ ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸಿತ್ತು ,ಪಾನಕದ ಗಾಡಿ ಟ್ರ್ಯಾಕ್ಟರ್‌ನಲ್ಲಿ ತಾವು ತಂದಂತ ವಸಂತ ಸೇವೆ ಬಂದಂತ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.