ಹನೂರಿನಲ್ಲಿ ಕಂಡಾಯ ಉತ್ಸವ ಸಡಗರ

| Published : May 25 2024, 12:53 AM IST

ಸಾರಾಂಶ

ಪಟ್ಟಣದಲ್ಲಿ ವಿಜೃಂಭಣೆಯ ಕಂಡಾಯ ಉತ್ಸವ ಸಂಭ್ರಮ ಸಡಗರದೊಂದಿಗೆ ಜರುಗಿತು. ಎ.ಜೆ ಕಾಲೋನಿ ಆದಿಜಾಂಬವ ಸಮುದಾಯದ ವತಿಯಿಂದ ನಡೆಯುತ್ತಿರುವ ಕಂಡಾಯಗಳ ಉತ್ಸವ ಮೆರವಣಿಗೆ ಪಟ್ಟಣದ ಆರ್ ಎಸ್ ದೊಡ್ಡಿ ಮುಖ್ಯ ರಸ್ತೆಯಿಂದ ಸಾಗಿ ಪ್ರಮುಖ ರಸ್ತೆಗಳಲ್ಲಿ ಕಂಡಾಯಗಳ ಉತ್ಸವ ಮೆರವಣಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಾದ್ಯ ಮೇಳಗಳ ಜೊತೆ ನಡೆಯಿತು.

ಹನೂರು: ಪಟ್ಟಣದಲ್ಲಿ ವಿಜೃಂಭಣೆಯ ಕಂಡಾಯ ಉತ್ಸವ ಸಂಭ್ರಮ ಸಡಗರದೊಂದಿಗೆ ಜರುಗಿತು. ಎ.ಜೆ ಕಾಲೋನಿ ಆದಿಜಾಂಬವ ಸಮುದಾಯದ ವತಿಯಿಂದ ನಡೆಯುತ್ತಿರುವ ಕಂಡಾಯಗಳ ಉತ್ಸವ ಮೆರವಣಿಗೆ ಪಟ್ಟಣದ ಆರ್ ಎಸ್ ದೊಡ್ಡಿ ಮುಖ್ಯ ರಸ್ತೆಯಿಂದ ಸಾಗಿ ಪ್ರಮುಖ ರಸ್ತೆಗಳಲ್ಲಿ ಕಂಡಾಯಗಳ ಉತ್ಸವ ಮೆರವಣಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಾದ್ಯ ಮೇಳಗಳ ಜೊತೆ ನಡೆಯಿತು.

12 ವರ್ಷಗಳ ನಂತರ ನಡೆಯುತ್ತಿರುವ ಕೊಂಡೋತ್ಸವ ಪೂಜಾ ಕಾರ್ಯಕ್ರಮಕ್ಕೆ ಪಟ್ಟಣ ಸೇರಿದಂತೆ 78 ಹಳ್ಳಿಗಳಿಂದಲೂ ಸಿದ್ದಪ್ಪಾಜಿ ಭಕ್ತರು ಈ ಕಂಡಾಯ ಉತ್ಸವದಲ್ಲಿ ಭಾಗವಹಿಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದರು. ವಾದ್ಯ ಮೇಳ ರಂಗ ಕುಣಿತದೊಂದಿಗೆ ಕಂಡಾಯ ಉತ್ಸವಗಳ ಮೆರವಣಿಗೆ ನಡೆಯಿತು ಶನಿವಾರ ಬೆಳಗಿನ ಜಾವ ಕೊಂಡೋತ್ಸವ ನಡೆಯುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದಾರೆ. ಸಮುದಾಯದ ಯುವಕರು ಕಂಡಾಯಗಳ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ರಂಗ ಕುಣಿತದೊಂದಿಗೆ ಶಿಳ್ಳೆ ಕೇಕೆ ಸಂಭ್ರಮದೊಂದಿಗೆ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಕಂಡಾಯ ಉತ್ಸವ ಕೊಂಡೋತ್ಸವ ಕಾರ್ಯಕ್ರಮಕ್ಕೆ ಪಟ್ಟಣದ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸುವ ಮೂಲಕ ಬಸ್ ನಿಲ್ದಾಣದಲ್ಲಿ ಉತ್ಸವ ಮೆರವಣಿಗೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.