ನೀರಿಗಾಗಿ ಕಣಿವೇ ಬಸವೇಶ್ವರನಿಗೆ ಪೂಜೆ

| Published : Apr 02 2024, 01:03 AM IST

ಸಾರಾಂಶ

ಈ ಬಾರಿ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಮಲೆನಾಡು ಜನರು ತತ್ತರಿಸಿ ಹೋಗಿದ್ದು, ದನಕರುಗಳಿಗೂ ಕುಡಿಯಲು ನೀರಿಲ್ಲದೆ ಹಾಹಾಕಾರ ಉಂಟಾಗಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಡೂರು-ಮಂಗಳೂರು ರಸ್ತೆಯ ಪಕ್ಕದ ಗುಡ್ಡದಲ್ಲಿರುವ ಬಸವನಗುಡಿಯ ಕಣಿವೇ ಬಸವೇಶ್ವರನ ಬಳಿ ಮಳೆ ಬರಿಸುವಂತೆ ಮೊರೆ ಹೋಗಿದ್ದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಣಿವೇ ಬಸವೇಶ್ವರನಲ್ಲಿ ವಿಶೇಷ ಶಕ್ತಿ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಈ ಬಾರಿ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಮಲೆನಾಡು ಜನರು ತತ್ತರಿಸಿ ಹೋಗಿದ್ದು, ದನಕರುಗಳಿಗೂ ಕುಡಿಯಲು ನೀರಿಲ್ಲದೆ ಹಾಹಾಕಾರ ಉಂಟಾಗಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಡೂರು-ಮಂಗಳೂರು ರಸ್ತೆಯ ಪಕ್ಕದ ಗುಡ್ಡದಲ್ಲಿರುವ ಬಸವನಗುಡಿಯ ಕಣಿವೇ ಬಸವೇಶ್ವರನ ಬಳಿ ಮಳೆ ಬರಿಸುವಂತೆ ಮೊರೆ ಹೋಗಿದ್ದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಣಿವೇ ಬಸವೇಶ್ವರನಲ್ಲಿ ವಿಶೇಷ ಶಕ್ತಿಯನ್ನು ಹೊಂದಿದ್ದು ಭಕ್ತರು ಬೇಡಿದ ವರವನ್ನು ನೀಡಿವುದರಿಂದ ಈ ಬಾರಿ ಜಿಲ್ಲೆ, ಅಂತರ ಜಿಲ್ಲೆ ಮತ್ತು ತಾಲೂಕಿನಿಂದ ಸಾವಿರಾರು ಭಕ್ತರು ಆಗಮಿಸಿ ಮಳೆ ಕರುಣಿಸುವಂತೆ ಮನವಿಗೊಂಡರು.

ಆದಿಚುಂಚನ ಗಿರಿ ಶೃಂಗೇರಿ ಶಾಖಾ ಮಠ ಶ್ರೀ ಗುಣನಾಥ ಸ್ವಾಮೀಜಿ ಇಲ್ಲಿಗೆ ಆಗಮಿಸಿ ಕಣಿವೇ ಬಸವೇಶ್ವರನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಜಿ.ಎಚ್.ಹಾಲಪ್ಪಗೌಡ, ಕೆ.ಎಚ್.ವೆಂಕಟೇಶ್, ಎಂ.ಆರ್.ಜಗದೀಶ್, ದೀಪಕ್ ದೊಡ್ಡಯ್ಯ, ಎನ್.ಎಲ್.ಪುಣ್ಯಮೂರ್ತಿ, ರಾಮಚಂದ್ರ ಒಡೆಯರ್, ಶ್ರೀಧರ್‌, ಹರೀಶ್, ತೇಜಸ್ವಿ, ಚಂದ್ರು ಒಡೆಯರ್, ಪ್ರದೀಪ್ ಕುಮಾರ್, ಮಂಜುನಾಥ ರಾಜ್ ಅರಸ್, ಸಂಪತ್ ಕುಮಾರ್ ಸೇರಿದಂತೆ ಭಕ್ತರ ದಂಡೇ ತಂಡೋಪತಂಡವಾಗಿ ಆಗಮಿಸಿ ಕಣಿವೇ ಬಸವೇಶ್ವರನ ಆಶಿರ್ವಾದ ಪಡೆದರು. 1 ಕೆಸಿಕೆಎಂ 9ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸವನಗುಡಿಯ ಕಣಿವೇ ಬಸವೇಶ್ವರನ ಬಳಿ ಮಳೆ ಬರಿಸುವಂತೆ ಭಕ್ತರು ಮೊರೆ ಹೋಗಿದ್ದರು.