ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕ ಹಾಗೂ ಜನ ಚೈತನ್ಯ ಫೌಂಡೇಷನ್ ವತಿಯಿಂದ ಫೆ. 19 ರಂದು ಸಂಜೆ 4.30ಕ್ಕೆ ನಾದಬ್ರಹ್ಮ ಸಂಗೀತಸಭಾದಲ್ಲಿ ಭಾವ ತರಂಗ ಚಲನಚಿತ್ರ ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮತ್ತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪರಿಷತ್ತಿನ ಅಧ್ಯಕ್ಷ ನಾಗರಾಜು ವಿ. ಬೈರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನಾಡಿನ ಹೆಸರಾಂತ ಕವಿಗಳಾದ ರಾಷ್ಟ್ರಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಕೆ.ಎಸ್. ನಿಸಾರ್‌ಅಹಮದ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಗೋಪಾಲಕೃಷ್ಣ ಅಡಿಗ, ಬಿ.ಆರ್. ಲಕ್ಷ್ಮಣರಾವ್, ಸಂತ ಶಿಶುನಾಳ ಷರೀಫ, ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ ಅವರು ರಚಿಸಿದ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಭಾವಗೀತೆ, ಕವಿತೆಗಳನ್ನು ಭಾವ ತರಂಗ ಕಾರ್ಯಕ್ರದಲ್ಲಿ ಹಾಡಲಾಗುವುದು ಎಂದರು.ಗಾಯಕ ಆರ್. ಲಕ್ಷ್ಮಣ್ ಗಾಯನ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಗಾಯಕರಾದ ಎ.ಡಿ. ಶ್ರೀನಿವಾಸ್, ರಾಜೇಶ್ ಪಡಿಯಾರ್, , ಎಸ್. ಅಮರ್, ಅಶ್ವಿನ್‌ಅತ್ರಿ, ಎನ್. ಬೆಟ್ಟೇಗೌಡ, ಶ್ರೀಧರ್, ಜಾಯ್ಸ್ ವೈಶಾಕ್, ಪೂರ್ಣಿಮಾ, ಸುಮಾ, ಪುಷ್ಪಲತಾ ಶಿವಕುಮಾರ್, ಶುಭಾ ಪಲ್ಲವಿ, ವೇದಶ್ರೀ ಅವರು ಗಾಯನದಲ್ಲಿ ಧ್ವನಿಗೂಡಿಸುವುದಾಗಿ ಅವರು ತಿಳಿಸಿದರು.ಕೀ ಬೋರ್ಡ್ ನಲ್ಲಿ ಪುರುಷೋತ್ತಮ್, ರಿದಂ ಪ್ಯಾಡ್ ನಲ್ಲಿ ರಾಘವೇಂದ್ರ ಪ್ರಸಾದ್, ತಬಲದಲ್ಲಿ ಇಂದು ಶೇಖರ್, ಮ್ಯಾಂಡೋಲಿನ್ ನಲ್ಲಿ ವಿಶ್ವನಾಥ್, ಕೊಳಲಿನಲ್ಲಿ ಪುನೀತ್ ನೆರವು ನೀಡುವರು.ಸಿ. ಅಶ್ವತ್ಥ್ ಮೈಸೂರು ಅನಂತಸ್ವಾಮಿ, ಡಾ. ರಾಜಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ ಅವರು ಹಾಡಿರುವ ಸುಮಾರು 30 ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದು, ಪ್ರವೇಶ ಉಚಿತವಿರುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದರು.ಸುದ್ದಿಗೋಷ್ಠಿಯಲ್ಲಿ ಜನ ಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್, ಕಾರ್ಯದರ್ಶಿ ಸಿರಿಬಾಲು, ಮಾಧ್ಯಮ ಸಲಹೆಗಾರ ಎನ್. ಬೆಟ್ಟೇಗೌಡ, ಎಸ್. ಅಮರ್, ಜಾಯ್ಸ್ ವೈಶಾಕ್ ಇದ್ದರು.