ಕನ್ನಡದ ಭಾಷೆ ಮತ್ತು ನೆಲ ತನ್ನದೇಯಾದ ವೈಶಿಷ್ಟ್ಯ ಹೊಂದಿದ್ದು ಅದನ್ನುಇನ್ನಷ್ಟು ಶ್ರೀಮಂತಗೊಳಿಸಲು ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅತೀ ಅವಶ್ಯವಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ ಹೇಳಿದರು.
ಶಿಗ್ಗಾಂವಿ: ಕನ್ನಡದ ಭಾಷೆ ಮತ್ತು ನೆಲ ತನ್ನದೇಯಾದ ವೈಶಿಷ್ಟ್ಯ ಹೊಂದಿದ್ದು ಅದನ್ನುಇನ್ನಷ್ಟು ಶ್ರೀಮಂತಗೊಳಿಸಲು ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅತೀ ಅವಶ್ಯವಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ ಹೇಳಿದರು.ತಾಲೂಕಿನ ಜಕ್ಕನಕಟ್ಟಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು, ಶಿಗ್ಗಾಂವಿ ತಾಲೂಕು ಘಟಕ ವತಿಯಿಂದ ೭೦ನೇ ಕರ್ನಾಟಕ ರಾಜೋತ್ಸವ ಸಂಭ್ರಮ ಕಾರ್ಯಕ್ರಮ, ಕನ್ನಡ ಜಾಗೃತಿ ಅಭಿಯಾನ ಮತ್ತು ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡನ್ನು ಅನೇಕ ಮಹನೀಯರ ಹೋರಾಟದ ಫಲವಾಗಿ ಇಂದು ೭೦ನೇ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂಭ್ರಮ ನಮ್ಮದಾಗಿದೆ. ಕಾರಣ ಕನ್ನಡಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿಗಳ ಹೋರಾಟದ ಮಧ್ಯೆ ಇಂದಿನ ಯುವ ಪೀಳಿಗೆ ಕನ್ನಡಕ್ಕೆ ತಮ್ಮ ಕೊಡುಗೆಯನ್ನು ನೀಡುವ ಅವಶ್ಯಕತೆಯಿದೆ. ಕನ್ನಡ ಎಂದರೇ ಸಾಲದು ಕನ್ನಡ ಉಸಿರಾಗಬೇಕು, ಕನ್ನಡ ನಮ್ಮ ಜೀವನವಾಗಬೇಕು, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳ ಅಧ್ಯಯನ ಮಾಡಬೇಕು ಮತ್ತು ಕವನ-ಕಥೆ ರಚನೆಗೆ ಮುಂದಾಗಬೇಕು. ಕಸಾಪ ಶಿಗ್ಗಾಂವಿ ಈಗಾಗಲೇ ಮಕ್ಕಳು ಬರೆದ ಕವನಗಳ ಎರಡು ಸಂಪಾದಿತ ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಿದ್ದು, ಮುಂದೆಯೂ ಸಹ ಇನ್ನಷ್ಟು ಕವನ ಸಂಕಲನಗಳನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ ಎಂದರು.ವಿಶೇಷ ಉಪನ್ಯಾಸವನ್ನು ಸರ್ಕಾರಿ ಪ್ರೌಢಶಾಲೆ ಹಿರೇಮಣಕಟ್ಟಿಯ ಶಿಕ್ಷಕ ಪ್ರಭು ಬಂಗೇರ ಅವರು ಕನ್ನಡ, ನಾಡು, ನುಡಿ, ಚಿಂತನೆ ಕುರಿತು ಕನ್ನಡ ನಾಡಿನ ಭವ್ಯ ಪರಂಪರೆ, ಪುರಾತನತೆ, ವೈವಿಧ್ಯತೆ, ಕನ್ನಡಿಗರ ಹೃದಯ ವೈಶ್ಯಾಲ್ಯತೆ, ಭಾಷೆ ಪ್ರೌಢಮೆ, ರಾಜಮನೆತನಗಳ ಗತವೈಭವ, ಕನ್ನಡದ ಕವಿಗಳು ಬರೆದ ವಿವಿಧ ಗ್ರಂಥಗಳು ಮತ್ತು ಕವಿತೆಗಳನ್ನು ವಿವರಿಸುವ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಹಾಗೂ ಭಾಷಾಭಿಮಾನವನ್ನು ಇಮ್ಮಡಿಗೊಳಿಸಿದರು.ಜಕ್ಕನಕಟ್ಟಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ರಾಘವೇಂದ್ರ ಓ.ಬಿ. ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಎಚ್.ಡಿ.ಕುಂಕೂರ, ಎನ್.ಎಸ್.ಬರದೂರ, ಎಸ್.ಎಂ. ದೇವತಿ, ಪ್ರಭು ಬಂಗೇರ, ಭಾರತಿ ಛಬ್ಬಿ, ಲಲಿತಾ ಹಿರೇಮಠ, ನಾಗರಾಜ ಲಮಾಣಿ, ವಿ.ಶಿ. ಮರಿಗೌಡರ, ರಾಘವೇದ್ರ, ವರ್ಧಮಾನ ಛಬ್ಬಿ ಅವರನ್ನು ಸನ್ಮಾನಿಸಲಾಯಿತು.ಮಹಾಂತೇಶ ನಾಯ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ, ರಮೇಶ ಆಲೂರ, ರಾಚಪ್ಪ ಉಪಾಸಿ. ಬಸವರಾಜ, ವಿದ್ಯಾ ಮುಂಡಗೋಡ, ಸುಮಾ ಕೆ., ಮೇನಿಕಾ ಕೆ., ಲತಾ ರಜಪೂತ, ಗಂಗಮ್ಮ ಸುಣಗಾರ, ರೇಣುಕಾ ಶಿವಪ್ಪನವರ ಶಾಲೆ ಸಿಬ್ಬಂದಿ ಇದ್ದರು.