ಸಾರಾಂಶ
ಕನ್ನಡ ಅತ್ಯಂತ ಪ್ರಾಚೀನ ಮತ್ತು ಸುಂದರ ಭಾಷೆ. ಅದನ್ನು ಪ್ರೀತಿಸಿ ಗೌರವಿಸಬೇಕು
ಮುಂಡಗೋಡ:
ಕನ್ನಡ ಅತ್ಯಂತ ಪ್ರಾಚೀನ ಮತ್ತು ಸುಂದರ ಭಾಷೆ. ಅದನ್ನು ಪ್ರೀತಿಸಿ ಗೌರವಿಸಬೇಕು ಎಂದು ಇಲ್ಲಿನ ಸಂಗಮೇಶ್ವರ ಕೋ-ಆಪ್ ಸೊಸೈಟಿ ಅಧ್ಯಕ್ಷ ಸಂಗಪ್ಪ ಕೋಳೂರ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಪಟ್ಟಣದ ಕೆಎಚ್‌ಬಿ ಕಾಲನಿಯ ಸಂಗಮೇಶ್ವರ ಸಭಾ ಭವನದಲ್ಲಿ ಆಯೋಜಿಸಿದ್ದ ಕನ್ನಡ ಕಾರ್ತಿಕ-೨೦೨೩ ಅನುದಿನ ಅನುಸ್ಪಂದನದಡಿ ಶಿವರಾಮ ಕಾರಂತರ ಚಿಂತನೆಗಳ ಒಳನೋಟ ಉಪನ್ಯಾಸ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ಕೇವಲ ಸಮ್ಮೇಳನಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಕನ್ನಡ ಭಾಷೆ ಮಾತನಾಡಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಸಂತೋಷಕುಮಾರ ಪಾಟೀಲ ಕುವೆಂಪು ಕುರಿತು ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ದೈವಜ್ಞ ಮತ್ತು ಸಂಜಯ ಕವಟಿಕೊಪ್ಪ, ಗೌರವ ಕಾರ್ಯದರ್ಶಿ ವಿನಾಯಕ, ಎಸ್.ಬಿ. ಹೂಗಾರ, ಆರ್.ಜೆ. ಬೆಳ್ಳೆನವರ, ಶಿವಾನಂದ ವಾಲಿಶೆಟ್ಟರ, ನಾಗಯ್ಯ ಹಿರೇಮಠ, ಆರ್.ಎಸ್. ಕಲಾಲ, ಪ್ರಶಾಂತ ಸಾವಳಗಿ, ಎಸ್.ವಿ. ಹೊಸಮನಿ, ಕಸಾಪ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ ನಿರೂಪಿಸಿದರು.