ಸಾರಾಂಶ
ಕನ್ನಡ ಯಾವ ಭಾಷೆಯನ್ನೂ ತಿರಸ್ಕರಿಸದೆ ಎಲ್ಲವನ್ನೂ ಒಪ್ಪಿಕೊಂಡು ತನ್ನ ಒಡಲಲ್ಲಿ ಇರಿಸಿರುವ ಕಾರಣ ಇವತ್ತಿಗೂ ಕನ್ನಡ ಶ್ರೇಷ್ಠ ಭಾಷೆ ಎನಿಸಿಕೊಂಡಿದೆ ಎಂದು ಬೆಂಗಳೂರು ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ವಿಮರ್ಶಕ ಡಾ.ರವಿಕುಮಾರ್ ನೀಹ ಅಭಿಪ್ರಾಯಪಟ್ಟರು. ತುರುವೇಕೆರೆಯಲ್ಲಿ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕನ್ನಡ ಯಾವ ಭಾಷೆಯನ್ನೂ ತಿರಸ್ಕರಿಸದೆ ಎಲ್ಲವನ್ನೂ ಒಪ್ಪಿಕೊಂಡು ತನ್ನ ಒಡಲಲ್ಲಿ ಇರಿಸಿರುವ ಕಾರಣ ಇವತ್ತಿಗೂ ಕನ್ನಡ ಶ್ರೇಷ್ಠ ಭಾಷೆ ಎನಿಸಿಕೊಂಡಿದೆ ಎಂದು ಬೆಂಗಳೂರು ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ವಿಮರ್ಶಕ ಡಾ.ರವಿಕುಮಾರ್ ನೀಹ ಅಭಿಪ್ರಾಯಪಟ್ಟರು.ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೇಹಳ್ಳಿ ನೆಹರು ವಿದ್ಯಾಶಾಲಾ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸ ಕನ್ನಡಕ್ಕಿದೆ. ತ್ರಿಭಾಷಾ ಸೂತ್ರದಿಂದಲೇ ನಮಗೆ ಅರಿವಿಲ್ಲದಂತೆ ಹಿಂದಿ ಭಾಷಿಕರು ರೈಲ್ವೆ, ಬ್ಯಾಂಕ್, ಕೇಂದ್ರೀಯ ಶಾಲೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಉದ್ಯೋಗದಲ್ಲಿ ಸಿಂಹಪಾಲು ಪಡೆಯುವುದರಿಂದ ಕನ್ನಡಿಗರಿಗೆ ಸಹಜವಾಗಿಯೇ ಉದ್ಯೋಗದ ಅವಕಾಶಗಳು ಕೈತಪ್ಪಿ ಹೋಗಿವೆ ಎಂದರು.ಇದೇ ವೇಳೆ ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳನ್ನು, ಶೇ 100ರಷ್ಟು ಫಲಿತಾಂಶ ತಂದ ಶಿಕ್ಷಕರನ್ನು ಗೌರವಿಸಲಾಯಿತು. ನೆಹರು ಶಾಲೆಯ ಶಿಕ್ಷಕ ಶಿವಾನಂದ್ ಎಸ್.ಮಳಲಿಯವರಿಗೆ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಇ.ಒ ಎನ್.ಸೋಮಶೇಖರ್, ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಪ್ಪ, ದೊಡ್ಡಾಘಟ್ಟ ಚಂದ್ರೇಶ್, ಸಂಘದ ಅಧ್ಯಕ್ಷ ರಂಗಸ್ವಾಮಿ, ಸಂಘದ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.