ಸಾರಾಂಶ
ಕುದೂರು: ಕನ್ನಡ ನೆಲದ್ದೇ ಅದ್ಭುತವಾದ ಸಂಸ್ಕೃತಿ. ದೂರದ ನೇಪಾಳ ದೇಶದ ತನಕ ಕನ್ನಡ ಭಾಷೆಯ ಸೆಳೆತವಿರುವುದು ನಾವು ಕಾಣಬಹುದು ಎಂದು ಸಬ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹೇಳಿದರು.
ಕುದೂರು: ಕನ್ನಡ ನೆಲದ್ದೇ ಅದ್ಭುತವಾದ ಸಂಸ್ಕೃತಿ. ದೂರದ ನೇಪಾಳ ದೇಶದ ತನಕ ಕನ್ನಡ ಭಾಷೆಯ ಸೆಳೆತವಿರುವುದು ನಾವು ಕಾಣಬಹುದು ಎಂದು ಸಬ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹೇಳಿದರು.
ಕುದೂರು ಗ್ರಾಮದ ಅಂಬೇಡ್ಕರ್ ಆಟೋ ಚಾಲಕರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಎರಡು ರಾಜ್ಯಗಳಲ್ಲಿ ಕನ್ನಡ ಮೊದಲ ಸ್ಥಾನದಲ್ಲಿದೆ ಎಂದರು.ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಮಂಜೇಶ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ತಮ್ಮ ಮಗನಿಗೆ ಅಂತರ್ಜಾತಿ ವಿವಾಹ ಮಾಡಲು ಸ್ಪೂರ್ತಿ ನೀಡಿದ್ದು ಕನ್ನಡ ನೆಲದ ರಂಗರಾವ್, ಜ್ಞಾನಪೀಠ ಪ್ರಶಸ್ತಿ ರೂಪುಗೊಳ್ಳಲು ಕಾರಣರಾದ ಮಾಗಡಿಯ ಕರ್ಲಮಂಗಲ ಶ್ರೀಕಂಠಯ್ಯ, ಇಂತಹ ನೂರಾರು ಉದಾಹರಣೆಗಳು ಕನ್ನಡದ ನೆಲದಲ್ಲಿದೆ. ಅದರ ರೋಚಕತೆಯನ್ನು ಇಂದಿನ ಯುವ ಜನಾಂಗ ಅಧ್ಯಯನ ಮಾಡಬೇಕಿದೆ ಎಂದರು.
ಜಿಲ್ಲಾ ದಲಿತ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಆಟೋ ಚಾಲಕರು ಕನ್ನಡ ನಾಡು ನುಡಿಗೆ ಕೊಟ್ಟ ಕೊಡುಗೆ ಎಂದಿಗೂ ಮರೆಯುವಂತಿಲ್ಲ. ಆಟೋಗಳ ಹಿಂದೆ ಬರೆಸಿರುವ ಕನ್ನಡ ನುಡಿಮುತ್ತುಗಳಿಂದ ಅದೆಷ್ಟೋ ಜನರು ಪ್ರೇರಿತರಾಗಿದ್ದಾರೆ. ಹಾಯ್ ಬೆಂಗಳೂರು ಎಂಬ ಪತ್ರಿಕೆ ಹೆಸರು ಇಡಲು ಆಟೋ ಮೇಲಿನ ಬರಹವೇ ರವಿಬೆಳಗೆರೆಯವರಿಗೆ ಸ್ಪೂರ್ತಿಯಾಗಿತ್ತಂತೆ ಎಂದರು.ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರ ಹೆರಿಗೆ ತಾಯಂದಿರಿಗೆ ಉಚಿತ ಸೇವೆ, ಕನ್ನಡ ಬಲ್ಲವರಿಗೆ ವಿಶೇಷ ಸೇವೆ ಎಂಬೆಲ್ಲಾ ಸೇವೆ ಆರಂಭಗೊಂಡಿದ್ದು ಆಟೋಚಾಲಕರಿಂದಲೆ. ಕನ್ನಡ ಬಿಟ್ಟು ನಮಗೆ ಬೇರೇನೂ ಗೊತ್ತಿಲ್ಲ. ಅದಕ್ಕಾಗಿಯೇ ನಮ್ಮ ಆಟೋ ಮೇಲೆ ಕನ್ನಡಮ್ಮನ ನುಡಿಮುತ್ತುಗಳನ್ನು ಬರೆಸಿ ಸಂಭ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಹೊನ್ನರಾಜು, ನಾರಾಯಣ, ಕಬೀರ್, ರೇಣುಕಾಪ್ರಸಾದ್, ಜಗದೀಶ್, ರಹಮತ್, ಅಪ್ಪಾಜಿ, ಸುರೇಶ್, ಚಂದ್ರಶೇಖರ್, ಚಿನ್ನಿರಾಜ್ ಹಾಜರಿದ್ದರು.5ಕೆಆರ್ ಎಂಎನ್ 3.ಜೆಪಿಜಿ
ಕುದೂರು ಗ್ರಾಮದಲ್ಲಿ ಅಂಬೇಡ್ಕರ್ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.