ಸಾರಾಂಶ
ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಹೆಮ್ಮೆಯ ವಿಷಯ ಎಂದು ತಹಸೀಲ್ದಾರ್ ಕೆ. ನೀಲಪ್ರಭಾ ಹೇಳಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಹೆಮ್ಮೆಯ ವಿಷಯ ಎಂದು ತಹಸೀಲ್ದಾರ್ ಕೆ. ನೀಲಪ್ರಭಾ ಹೇಳಿದರು.ಗಡಿ ತಾಲೂಕು ಗುರುಮಠಕಲ್‌ನಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತ, ಸಮೃದ್ಧ, ಸಂಪದ್ಭರಿತ ನಾಡು ನಮ್ಮದು, ಎಲ್ಲ ಭಾಷೆಗಳಿಗೆ ಕನ್ನಡ ತಾಯಿಯಂತೆ ಎಂದರು.ವಿಶೇಷ ಉಪನ್ಯಾಸ ನಿಡಿದ ಉಪನ್ಯಾಸಕ ಶರಣಪ್ಪ ಚಿಂತಕುಂಟಾ, 1956 ರಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆದ ಬಳಿಕ ಕರ್ನಾಟಕ ನಾಮಕರಣ ಆಯಿತು ಎನ್ನುವ ಇತಿಹಾಸವಿದೆ. 2 ಸಾವಿರಕ್ಕೂ ಹೆಚ್ಚು ಭಾಷೆಗಳಲ್ಲಿ ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂತೆ ಎಂದು ಕವಿಗಳು ವರ್ಣಿಸಿದ್ದಾರೆ. ಕವಿರಾಜ ಮಾರ್ಗ ದ ನಾಲ್ಕು ಸಾಲು ಓದಿದರೆ ಸಾಕು ಕನ್ನಡಿಗರು ಎಂತಹವರು ಎಂದು ತಿಳಿದುಕೊಳ್ಳಬಹುದು. ಅಕ್ಷರ ಜ್ಞಾನವಿಲ್ಲದಿದ್ದರೂ ಸಾಹಿತ್ಯ ರಚನೆ ಮಾಡುವ ಗತ್ತು ಕನ್ನಡಕ್ಕಿದೆ ಎಂದು ಹೇಳಿದರು.ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಸಿಪಿಐ ದೇವಿಂದ್ರಪ್ಪ ಧೂಳಖೇಡ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಷ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ಕಸಾಪ ಅಧ್ಯಕ್ಷ ಬಸರೆಡ್ಡಿ ಎಂ.ಟಿ.ಹಳ್ಳಿ, ಸಿಡಿಪಿಓ ಶರಣಬಸಪ್ಪ, ಉಪನ್ಯಾಸಕ ಪ್ರಮುಖರಾದ ಜಿ.ತಮ್ಮಣ್ಣ, ನಾಗಭೂಷಣ ಆವಂಟಿ, ನರಸರೆಡ್ಡಿ ಪಾಟೀಲ್ ಗಡ್ಡೆಸೂಗುರ, ಸರೋಜಾ, ಸೈಯದ ಬಾಬಾ, ಜಗದೀಶ ಮೇಂಗಜಿ,ಗೋಪಾಲಕೃಷ್ಣ ಮೇದಾ, ಶರಣು ಎಲ್ಹೇರಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಕಾಂತ ಜನಾರ್ಧನ ಇತರರು ಇದ್ದರು. ರವೀಂದ್ರ ಚವ್ಹಾಣ ಸ್ವಾಗತಿಸಿದರು. ನಾರಾಯಣ ರೆಡ್ಡಿ ಪೋಲೀಸ್ ಪಾಟೀಲ ನಿರೂಪಿಸಿದರು. ಕನ್ನಡ ಸಾಧಕ ಮಕ್ಕಳಿಗೆ ಸನ್ಮಾನ ಮಾಡಲಾಯಿತು.