ಕನ್ನಡ ನುಡಿಯಲ್ಲ, ಜೀವನ ಕ್ರಮ: ಡಾ. ಅಂದಯ್ಯ

| Published : Nov 02 2024, 01:32 AM IST

ಸಾರಾಂಶ

ಕರ್ನಾಟಕ ಮತ್ತು ಕನ್ನಡ ಎರಡೂ ಪದಗಳು ಪ್ರತ್ಯೇಕವಾಗಿ ಬೆಳೆದು ಹಾದಿಯ ಜತೆಗೆ ಕಮ್ಮಿತ್ತನಾಡು, ಕರ್ನಾಟಕೇಶ್ವರ. ಕನ್ನಡ ಕುಲಪುರೋಹಿತ ಮುಂತಾದ ಪದಗಳ ಹಿನ್ನೆಲೆಯಲ್ಲಿ ಕರ್ನಾಟಕದ ಭಿನ್ನ ಚರಿತ್ರೆ ಕಟ್ಟಿಕೊಳ್ಳುವ ಅಗತ್ಯ

ಗದಗ: ಕನ್ನಡ ಕೇವಲ ಭಾಷಿಕ ಪದವಲ್ಲ. ನಮ್ಮ ಜನರನ್ನು ಅನೇಕ ಶತಮಾನಗಳ ಕಾಲ ಒಟ್ಟುಗೂಡಿಸಿ ಬದುಕಿಸಿದ ಶಕ್ತಿಯೆಂದು ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅಂದಯ್ಯ ಅರವಟಗಿಮಠ ಹೇಳಿದರು.

ಅವರು ಗದಗ ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಮತ್ತು ಕನ್ನಡ ಎರಡೂ ಪದಗಳು ಪ್ರತ್ಯೇಕವಾಗಿ ಬೆಳೆದು ಹಾದಿಯ ಜತೆಗೆ ಕಮ್ಮಿತ್ತನಾಡು, ಕರ್ನಾಟಕೇಶ್ವರ. ಕನ್ನಡ ಕುಲಪುರೋಹಿತ ಮುಂತಾದ ಪದಗಳ ಹಿನ್ನೆಲೆಯಲ್ಲಿ ಕರ್ನಾಟಕದ ಭಿನ್ನ ಚರಿತ್ರೆ ಕಟ್ಟಿಕೊಳ್ಳುವ ಅಗತ್ಯವಿದೆ, ಕವಿರಾಜಮಾರ್ಗಕಾರ ಹೇಳುವಂತೆ ಕಾವೇರಿಯಿಂದ ಗೋದಾವರಿಯವರೆಗೂ ಇದ್ದ ಕನ್ನಡ ಸೀಮೆಯು ಇವತ್ತಿನ ಮಹಾರಾಷ್ಟ್ರದ ಬಹುಭಾಗ ಕನ್ನಡ ಪ್ರದೇಶವಾಗಿತ್ತು. ಲಿಖಿತ ಪರಂಪರೆಗೆ ಪರ್ಯಾಯವಾಗಿ ಜನಪದರು ಕಟ್ಟಿಕೊಂಡ ಕನ್ನಡದ ಸ್ವರೂಪವೂ ಬಹು ಮಹತ್ವದ್ದೆಂದರು.ಇಂತಹ ಕನ್ನಡಕ್ಕೆ ಇಂದು ಎದುರಾಗಿರುವ ಆಪತ್ತು ಪ್ರಸ್ತಾಪಿಸಿದ ಅವರು ಇವುಗಳನ್ನು ಮೀರಲು ತಂತ್ರಜ್ಞಾನದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಎ.ಕೆ. ಮಠ ವಿದ್ಯಾರ್ಥಿಗಳು ಮುಂತಾದವರು ಮಾತನಾಡಿದರು. ವೀರಣ್ಣ ಬಡಿಗೇರ ನಿರೂಪಿಸಿದರು. ಡಾ. ವೀಣಾ ವಂದಿಸಿದರು. ಎನ್.ಎಸ್.ಎಸ್. ಅಧಿಕಾರಿ ವಾಗೀಶ್ ರೇಶ್ಮೆ ಒಳಗೊಂಡಂತೆ ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.