ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದೆ. ಆದರೆ, ಅದು ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಕೃಷಿಕ್ ಅಲೆಯನ್ಸ್ ಕ್ಲಬ್‌ನ ಅಧ್ಯಕ್ಷ ಕೆ.ಟಿ.ಹನುಮಂತು ಬೇಸರ ವ್ಯಕ್ತಪಡಿಸಿದರು.ಕೃಷಿಕ್ ಅಲೆಯನ್ಸ್ ಕ್ಲಬ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಪ್ರತಿಭಾಂಜಲಿ ಅಲೆಯನ್ಸ್ ಕ್ಲಬ್ ಹಾಗೂ ಸ್ನೇಹಜೀವಿ ಗೆಳೆಯರ ಬಳಗದಿಂದ ವಿ.ವಿ.ನಗರದ ಮೈದಾನದಲ್ಲಿ ನಡೆದ ೨೦ನೇ ಕನ್ನಡ ರಾಜ್ಯೋತ್ಸವ, ಅಲಯನ್ಸ್ ಕನ್ನಡ ಹಬ್ಬ ಕನ್ನಡೋತ್ಸವ-೨೦೨೫ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
೧೯೭೩ರಲ್ಲಿ ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಅಂದಿನಿಂದ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ನೆಲದಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ನಂತರದ ದಿನಗಳಲ್ಲಿ ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ ಅನುಷ್ಠಾನಗೊಳಿಸಿತ್ತು. ಆದರೆ, ಅದು ಪರಿಣಾಮಕಾರಿಯಾಗಿ ಇನ್ನೂ ಜಾರಿಯಾಗಿಲ್ಲ ಎಂದರು.ಯುವಕರಿಗೆ ಮುಖ್ಯವಾಗಿ ನೆಲ, ಜಲ, ಭಾಷೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಬಹಳಷ್ಟು ಮನೆಗಳಲ್ಲಿ ಕನ್ನಡವನ್ನೇ ಮಾತನಾಡದ ಪರಿಸ್ಥಿತಿ ಇದೆ. ಪ್ರತಿಯೊಂದು ಮನೆಯಲ್ಲೂ ಕನ್ನಡ ಮಾತನಾಡುವ ಕೆಲಸ ಆಗಬೇಕು ಎಂದರು.
ಗಾಯಕಿ ಸಾದ್ವಿನಿ ಕೊಪ್ಪ ಮಾತನಾಡಿ, ಕನ್ನಡವನ್ನು ಮಾತನಾಡುತ್ತಲೇ ಬೆಳೆಸಬೇಕು. ಅದು ನಮ್ಮ ಉಸಿರಾಗಬೇಕು. ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಜೀವನ ಶೈಲಿಯಾಗಿ ಬಂದಿದೆ. ಕನ್ನಡ ಕಲಿಸುತ್ತಲೇ ಬೆಳೆಸಬೇಕು ಎಂದರು.ಕನ್ನಡದಲ್ಲಿ ಸತ್ವ ಇದೆ. ಪದಗಳ ದೊಡ್ಡ ಭಂಡಾರವಿದೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ಡಿವಿಜಿಯವರು ಕಗ್ಗವನ್ನು ಕೊಟ್ಟಿದ್ದಾರೆ. ಅದರಲ್ಲಿ ಜೀವನದ ಸಾರ ಇದೆ. ರನ್ನ, ಪಂಪರಂತಹ ಹಲವಾರು ಮಹನೀಯರು ಉತ್ತಮ ಸಾಹಿತ್ಯವನ್ನು ನೀಡಿದ್ದಾರೆ. ಕುವೆಂಪು ಅವರು ವಿಶ್ವಮಾನವ ತತ್ವವನ್ನು ಕೊಟ್ಟಿದ್ದಾರೆ. ಕನ್ನಡದಲ್ಲಿ ಜೀವನಕ್ಕೆ ಎಷ್ಟು ಬೇಕೋ ಅಷ್ಟೆಲ್ಲವೂ ಇದೆ. ನಾವೂ ಸಹ ಕನ್ನಡವನ್ನು ಅಭ್ಯಾಸ ಮಾಡೋಣ. ಇತರರಿಗೂ ಕಲಿಸುವ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ೧ನೇ ಉಪ ರಾಜ್ಯಪಾಲ ಶಶಿಧರ್ ಈಚಗೆರೆ, ೨ನೇ ಉಪ ರಾಜ್ಯಪಾಲ ಕೆ.ಎಸ್. ಚಂದ್ರಶೇಖರ್, ಕೃಷಿಕ್ ಲಯನ್ಸ್ ಅಧ್ಯಕ್ಷ ಎ.ಆರ್.ಕುಮಾರ್, ಕಾರ್ಯದರ್ಶಿ ಮೋಹನ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಎಂ. ಕುಮಾರ್, ಜಯಲಕ್ಷ್ಮಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಗಾಯಕಿ ಸಾದ್ವಿನಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಂತರ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.;Resize=(128,128))
;Resize=(128,128))
;Resize=(128,128))
;Resize=(128,128))